ಬಂಟ್ವಾಳ: ತಾಲೂಕಿನ ಪುಂಜಾಲಕಟ್ಟೆಯಲ್ಲಿರುವ  ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ  ಮೇಲಂತಸ್ತಿನಲ್ಲಿ ನೂತನ ಸಭಾಭವನ “ಸುವಿಧ” ಸಹಕಾರಿ ಭವನದ ಲೋಕಾರ್ಪಣೆ ಹಾಗೂ ದ.ಕ.ಜಿಲ್ಲಾ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭವು  ಶುಕ್ರವಾರ ನಡೆಯಿತು.   ಸಂಘದ   ನೂತನ ಸಭಾಭವನ ‘ಸುವಿಧ’ವನ್ನು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು  ದೀಪ ಬೆಳಗಿಸುವ ಮೂಲಕ  ಉದ್ಘಾಟಿಸಿದರು.

ಪಿಲಾತಬೆಟ್ಟು ವ್ಯ.ಸೇ.ಸ.ಸಂಘಕ್ಕೆ  ಜನೌಷಧಿ ಕೇಂದ್ರ :                  ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಸಭಾಧ್ಯಕ್ಷತೆ ವಹಿಸಿದ ‘ಸಹಕಾರಿ ರತ್ನ’ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಮಾತನಾಡಿ, ಪಿಲಾತಬೆಟ್ಟು ವ್ಯ.ಸೇ.ಸ.ಸಂಘಕ್ಕೆ ಜನೌಷಧಿ ಕೇಂದ್ರವನ್ನು ನೀಡುವುದಾಗಿ ಪ್ರಕಟಿಸಿದರು.

ಇದೇ ವೇಳೆ ಪುಂಜಾಲಕಟ್ಟೆ ಠಾಣೆಯ ಎಸ್ .ಐ. ಸೌಮ್ಯ, ಇರ್ವತ್ತೂರು ಗ್ರಾಪಂ ಪಿಡಿಒ ಅವಿನಾಶ್ ಬಿ.ಆರ್., ಮೆಸ್ಕಾಂನ ಪವರ್ ಮ್ಯಾನ್ ಗಳಾದ ಸಂತೋಷ್ ಬಿರಾದಾರ, ವಿಜಯಕುಮಾರ್ ಲಮಾಣಿ  ಅವರನ್ನು ಸನ್ಮಾನಿಸಲಾಯಿತು.

ದ.ಕ.ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ,  ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್,ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಪದ್ಮಶೇಖರ ಜೈನ್,  ಬಂಟ್ವಾಳ ತಾ.ಕೃಷಿ ಉತ್ಪಾದಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷ, ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ.ನಾಯಕ್,  ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿರಾವ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.                        ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುರುಷೋತ್ತಮ ಎಸ್.ಪಿ., ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕಿಣಿ,ವಿಟ್ಲ ವಲಯದ ಮೇಲ್ವಿಚಾರಕ ಯೋಗೀಶ್ ಎಚ್.,ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಉಪಾಧ್ಯಕ್ಷ ಉಮೇಶ್ ಪೂಜಾರಿ, ನಿರ್ದೇಶಕರಾದ ಸುಂದರ ನಾಯ್ಕ್,ಬೂಬ ಸಪಲ್ಯ,ಸಂತೋಷ್ ಕುಮಾರ್ ಶೆಟ್ಟಿ, ಚಂದ್ರಶೇಖರ್ ಹೆಗ್ಡೆ ,ನಾರಾಯಣ ಪೂಜಾರಿ, ಹರ್ಷಿಣಿ,ಸರೋಜ ಡಿ.ಶೆಟ್ಟಿ,ದಿನೇಶ್ ಮೂಲ್ಯ ವೇದಿಕೆಯಲ್ಲಿದ್ದರು.

ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಅವರು ಸ್ವಾಗತಿಸಿ, ಬಳಿಕ ಪ್ರಸ್ತಾವನೆಗೈದ ಅವರು  ಕೊರೋನದಂತ ಈ ಕಾಲಘಟ್ಟದಲ್ಲಿ ಮುನ್ನಚ್ಚರಿಕೆ ವಹಿಸಿ ಜಿಲ್ಲಾ ಸಹಕಾರಿ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಭವಿಷ್ಯದಲ್ಲಿ ಸಹಕಾರಿ ಸಪ್ತಾಹವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುವಂತಾಗಬೇಕು ಎಂದು ಹೇಳಿದರು.  ಸಂಘವು 2019-20  ನೇ ಸಾಲಿನಲ್ಲಿ 42.92 ಲ. ರೂ.ಲಾಭಗಳಿಸಿದ್ದು, ಸದಸ್ಯರಿಗೆ  ಶೇ.14 ಲಾಭಾಂಶ ವಿತರಿಸಲಾಗಿದೆ . ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ  ಎಲ್ಲರಿಗೂ  ಅವರು ಕೃತಜ್ಞತೆ ಸಲ್ಲಿಸಿದರು.  ನಿದೇಶಕ  ಪ್ರಭಾಕರ ಪಿ.ಎಂ.ವಂದಿಸಿದರು. ಕಲಾವಿದ ಎಚ್.ಕೆ.ನಯನಾಡು ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here