Wednesday, October 18, 2023

ಹಸಿರು ಪಟಾಕಿ ಸದ್ದಿನಲ್ಲಿ ಈ ವರ್ಷದ ದೀಪಾವಳಿ ಆಚರಿಸಿ.. ಏನಿದು ಹಸಿರು ಪಟಾಕಿ..?

Must read

ಬಂಟ್ವಾಳ: ಈ ದೀಪಾವಳಿಗೆ ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ.. ಹಾಗಾದರೇ ಏನಿದು ಹಸಿರು ಪಟಾಕಿ.. ಇದನ್ನು ಪತ್ತೆ ಹಚ್ಚುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ..
ರಾಜ್ಯದಲ್ಲಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಪಟಾಕಿ ಬ್ಯಾನ್ ಮಾಡಿತ್ತು. ಆದರೆ ಆ ನಂತರ ಸರ್ಕಾರ ಪಟಾಕಿ ಪ್ರಿಯರಿಗೋಸ್ಕರವೇ ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದೆ. ಆದರೆ ಸಾರ್ವಜನಿಕರಿಗೆ ಈ ಹಸಿರು ಪಟಾಕಿಯ ಬಗ್ಗೆ ಮಾಹಿತಿ ಇಲ್ಲ. ಈ ಪಟಾಕಿಗಳ ಬಗ್ಗೆ ಜಾಗೃತಿಯೂ ಇಲ್ಲ. ಹಸಿರು ಪಟಾಕಿ ಪತ್ತೆ ಮಾಡುವುದು ಹೇಗೆ ಎಂಬ ಬಗ್ಗೆ ಈ ವರದಿಯಿಂದ ತಿಳಿಯಿರಿ..
ಏನಿದು ಹಸಿರು ಪಟಾಕಿ..?
ಹಸಿರು ಪಟಾಕಿ ಎಂದರೆ ಪ್ರಕೃತಿಗೆ ಹೆಚ್ಚು ಹಾನಿ ಮಾಡದ ಪಟಾಕಿಗಳು. ಹೊಗೆ ಹಾಗೂ ಶಬ್ದ ಕಡಿಮೆ ಇರುವ ಪಟಾಕಿಗಳು. ಸಾಮಾನ್ಯ ಪಟಾಕಿಗಳಲ್ಲಿ ನೈಟ್ರೇಟ್, ಬೇರಿಯಂ ಕೆಮಿಕಲ್ ಬಳಸಲಾಗಿರುತ್ತದೆ. ಈ ರಾಸಾಯನಿಕ ಪರಿಸರಕ್ಕೆ ಹಾನಿ ಮಾಡುತ್ತದೆ. ಆದರೆ ಹಸಿರು ಪಟಾಕಿಗಳಲ್ಲಿ ಈ ರಾಸಾಯನಿಕ ಇರುವುದಿಲ್ಲ. ಹಸಿರು ಪಟಾಕಿಗಳು ಸ್ಪೋಟಿಸಿದಾಗ ನೀರಿನ ಆವಿ ಹಾಗೂ ಹೊಗೆ ಹೊರ ಹಾಕುವುದಿಲ್ಲ. ಸಾಮಾನ್ಯ ಪಟಾಕಿಗಿಂತಲೂ ಹಸಿರು ಪಟಾಕಿಗಳು ಸುರಕ್ಷಿತ. ಏಕೆಂದರೆ ಅದರಲ್ಲಿ ಅಲ್ಯೂಮಿನಿಯಂ ಮತ್ತು ಥರ್ಮೈಟ್ ಇರುತ್ತದೆ. ಹೀಗಾಗಿ ಹಸಿರು ಪಟಾಕಿ ಅಷ್ಟಾಗಿ ಮಾಲಿನ್ಯ ಉಂಟು ಮಾಡುವುದಿಲ್ಲ. ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯನಿಕಗಳಿಂದ ತಯಾರಿಸಲಾಗಿರುತ್ತದೆ. ಹಸಿರು ಪಟಾಕಿಗಳನ್ನು ಲ್ಯಾಬ್ ನಲ್ಲಿ ತಯಾರು ಮಾಡಲಾಗುತ್ತದೆ. ತೀವ್ರ ಮುತುವರ್ಜಿ ವಹಿಸಿ ಪರಿಸರ ಪಟಾಕಿ ತಯಾರಿಸುತ್ತಾರೆ. ಹೀಗಾಗಿ ಹಸಿರು ಪಟಾಕಿಗಳಿಂದ ಅಪಾಯ ತುಂಬಾ ಕಡಿಮೆ.


ಹಸಿರು ಪಟಾಕಿ ಪತ್ತೆ ಹೇಗೆ:
– ಹಸಿರು ಪಟಾಕಿಗಳ ಪತ್ತೆಗಾಗಿ ಅವುಗಳ ಮೇಲೆ ಹಸಿರು ಲೋಗೋ ಹಾಕಲಾಗಿರುತ್ತದೆ.
-’ಗೋ ಗ್ರೀನ್’ ಎಂದು ಪಟಾಕಿ ಮೇಲೆ ಬರೆಯಲಾಗುತ್ತದೆ.
-ಪಟಾಕಿ ಮೇಲೆ ಕ್ಯೂ.ಆರ್‍.ಕೋಡ್ ವ್ಯವಸ್ಥೆ ಅಳವಡಿಸಿರುತ್ತಾರೆ. ಸಾಂಪ್ರದಾಯಿಕ ಪಟಾಕಿಗಳಲ್ಲಿ ಈ ಕ್ಯೂ.ಆರ್‍.ಕೋಡ್ ವ್ಯವಸ್ಥೆ ಇರುವುದಿಲ್ಲ.
-ಹಸಿರು ಪಟಾಕಿಗಳ ಬಾಕ್ಸ್ ಮೇಲೆ ಗ್ರೀನ್ ಕ್ಯ್ರಾಕರ್‍ಸ್ ಎಂದು ನಮೋದಿಸಲಾಗಿರುತ್ತದೆ.
-ನಾರ್ಮಲ್ ಪಟಾಕಿ ಹಾಗೂ ಗ್ರೀನ್ ಪಟಾಕಿಗಳನ್ನು ನೋಡಿದ ತಕ್ಷಣವೇ ಗುರುತಿಸಬಹುದು. ಹೀಗಾಗಿ ಹಸಿರು ಪಟಾಕಿಗಳನ್ನು ಪತ್ತೆ ಮಾಡುವುದು ಸುಲಭ.

ಹಸಿರು ಪಟಾಕಿಗಳ ವೈಶಿಷ್ಟ್ಯಗಳು:
ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಿಂದ ಅಪಾಯ ಕಡಿಮೆ. ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯವೂ ಸಾಕಷ್ಟು ಕಡಿಮೆಯಾಗಿರುತ್ತದೆ. ಮುಖ್ಯವಾಗಿ ಈ ಹಸಿರು ಪಟಾಕಿಗಳಲ್ಲಿ ಅಪಾಯಕಾರಿ ಕೆಮಿಕಲ್ ಗಳನ್ನು ಹಾಕಿರುವುದಿಲ್ಲ. ಪರಿಸರಕ್ಕೆ ಕಡಿಮೆ ಮಟ್ಟದಲ್ಲಿ ಮಾಲಿನ್ಯವಗಾಗುತ್ತದೆ. ರಾಜ್ಯ ಸರ್ಕಾರ ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರದಿಂದ ಸಾರ್ವಜನಿಕರಿಗೆ ಭಾರಿ ಗೊಂದಲ ಉಂಟಾಗಿದೆ. ಸದ್ಯ ಅದನ್ನು ನಿವಾರಿಸಲು ಈ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಅಪಾಯಕಾರಿ ಪಟಾಕಿಗಳಿಂದ ತಪ್ಪಿಸಿಕೊಳ್ಳಲು ಈ ಹಸಿರು ಪಟಾಕಿಗಳನ್ನು ಬಳಸಿ.. ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ.

More articles

Latest article