ಬಂಟ್ವಾಳ: ವಾಮದಪದವುನಲ್ಲಿರುವ ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ನೇತೃತ್ವದ ನಿಯೋಗ ಬುಧವಾರ ಹಠಾತ್ ಭೇಟಿ ನೀಡಿತು.
ಇಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂಬ ಸ್ಥಳೀಯರ ದೂರಿನನ್ವಯ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮೊದಲಾದವರು ಹಠಾತ್ ಭೇಟಿ ನೀಡಿ ವಸತಿ ನಿಲಯದ ಕಚೇರಿ,ವಸತಿ ಕೊಠಡಿ ಹಾಗೂ ಅವರಣವನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಸತಿ ನಿಲಯದ ವಠಾರದಲ್ಲಿ ಮದ್ಯದ ಖಾಲಿ ಬಾಟಲ್‌ಗಳ ಸಹಿತ ನಿರುಪಯುಕ್ತ ವಸ್ತುಗಳು ಕಂಡುಬಂದಿದ್ದು,ಈ ವಸತಿ ನಿಲಯದಲ್ಲಿ ರಾತ್ರಿ ವೇಳೆ ಸಿಬಂದಿಯೊಬ್ಬನ ಸಹಿತ ಕೆಲವು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಇತರರು ಸೇರಿ ಮದ್ಯಸೇವನೆ ಹಾಗೂ ಮೋಜು ಮಸ್ತಿ ನಡೆಸುತ್ತಿದ್ದರೆಂದು ಸ್ಥಳೀಯರು ದೂರು ನೀಡಿದ್ದರು.


ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮಟ್ಟದ ಸಂಬಂಽಸಿದ ಅಽಕಾರಿಗಳಿಗೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅವರು ತಾಲೂಕು ಮಟ್ಟದ ಅಽಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದು ಕೊಂಡರಲ್ಲದೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ವಸತಿ ನಿಲಯದ ಅವ್ಯವಸ್ಥೆಯನ್ನು ಸರಿ ಪಡಿಸುವಂತೆ ಸೂಚಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ದೇಶಕಿ ಸುಲೋಚನಾ ಜಿ.ಕೆ. ಭಟ್, ಸ್ಥಳೀಯ ಪ್ರಮುಖರಾದ ಜಯರಾಮ ಶೆಟ್ಟಿ ಕಾಪು, ಪ್ರಭಾಕರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ವಿಜಯ ರೈ ಆಲದಪದವು, ವಿನೋದ್ ಪೂಜಾರಿ, ಭೋಜರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here