Sunday, October 22, 2023

ಹರಿಕೃಷ್ಣ ಬಂಟ್ವಾಳ ವಿಶ್ವಾಸಘಾತಕ ವ್ಯಕ್ತಿ: ರಮಾನಾಥ ರೈ ಟೀಕೆ

Must read

ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೇಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಇದಕ್ಕೆ ಪೂರ್ವಭಾವಿಯಾಗಿ ಯಾವುದೇ ಸಭೆ ನಡೆದಿಲ್ಲ. ಹೋಟೆಲ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಆರೋಪಿಸುವ ಹರಿಕೃಷ್ಣ ಬಂಟ್ವಾಳ ಇದಕ್ಕೆ ಸಾಕ್ಷಿ ಒದಗಿಸಲಿ ಎಂದು ಮಾಜಿ ಸಚಿವ ಬಿ.ರಮಾನಥ ರೈ ಸವಾಲೆಸಿದಿದ್ದಾರೆ.


ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲದಲ್ಲಿ ಬಿಜೆಪಿ ಜೆಡಿಎಸ್.ಮಾಡಿದ್ದು ಒಳ ಒಪ್ಪಂದ, ಬಂಟ್ವಾಳದಲ್ಲಿ ಅಂತದ್ದೇನು ನಡೆದಿಲ್ಲ. ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ನಳಿನ್ ಕುಮಾರ್ ಅವರ ಕಾರಿನಲ್ಲಿ ಕರೆದುಕೊಂಡು ಬಂದು ಬಿಜೆಪಿ ಪರ ಮತಹಾಕಿಸಿ, ಎಸ್ ಡಿ ಪಿ ಐ ಸದಸ್ಯೆ ಅಭಿನಾಬಿ ಶೇಖ್ ರನ್ನು ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಡಿದ್ದನ್ನು ಬಿಜೆಪಿ ನೆನಪು ಮಾಡಿಕೊಳ್ಳಲಿ ಎಂದು ರೈ ಹೇಳಿದರು.
ಹರಿಕೃಷ್ಣ ಬಂಟ್ವಾಳ್ ರಿಗೆ ಗ್ರಾಮಪಂಚಾಯತ್ ಸದಸ್ಯರಾಗಲೂ ಯೋಗ್ಯತೆ ಇಲ್ಲ.

ತಾನು 13 ವರ್ಷ ಮಂತ್ರಿಯಾಗಿದ್ದೆ, 6 ಬಾರಿ ಶಾಸಕನಾಗಿದ್ದೆ, 8 ಸಲ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ, ಆದರೆ ಒಂದೇ ಒಂದು ಗ್ರಾಮಪಂಚಾಯತ್ ಚುನಾವಣೆಗೆ ನಿಲ್ಲಲು ಯೋಗ್ಯತೆ ಇಲ್ಲದ ಹರಿಕೃಷ್ಣ ಬಂಟ್ವಾಳ್ ತನ್ನ ವಿರುದ್ಧ ವೈಯುಕ್ತಿಕ ತೇಜೋವಧೆಯ ಹೇಳಿಕೆ ನೀಡುತ್ತಿದ್ದಾರೆ. ತಾನು ಈವರೆಗೆ ಪ್ರಾಮಾಣಿಕತೆಗೆ ಒತ್ತು ಕೊಟ್ಟು ಕೆಲಸ ಮಾಡಿದ್ದೇನೆ, ಹರಿಕೃಷ್ಣ ಬಂಟ್ವಾಳ ಅಥವಾ ಇನ್ಯಾರ ಹೆಸರು ಉಲ್ಲೇಖಿಸಿ ತಾನು ಈವರೆಗೆ ಆರೋಪ ಮಾಡಿಲ್ಲ, ಆದರೆ ತನ್ನ ಡಿಎನ್ ಎ ಕುರಿತಾಗಿ ಸಂಶಯದ ಹೇಳಿಕೆ ನೀಡಿ ಅತ್ಯಂತ ಹೀನಾಯವಾಗಿ ಮಾತನಾಡಿರುವ ಹರಿಕೃಷ್ಣ ಬಂಟ್ವಾಳ್ ರವರಷ್ಟು ಕೆಳಮಟ್ಟದ ವ್ಯಕ್ತಿತ್ವ ತನ್ನದಲ್ಲ ಎಂದು ರೈ ಭಾವಪರವಶರಾಗಿ ನುಡಿದರು.

ಶರತ್ ಮಡಿವಾಳ, ನಾಸಿರ್, ಆಶ್ರಫ್ , ಹರೀಶ್ ಪೂಜಾರಿ, ಭಾರತಿ , ಅಬ್ದುಲ್ಲಾ, ಈ ರೀತಿ ಅನೇಕರ ಹತ್ಯೆ ಆಗಿದೆ. ಈ ಪೈಕಿ
ಈ ಭಾರತಿ ಹಾಗೂ ಅಬ್ದುಲ್ಲಾ ಕೊಲೆ ಪ್ರಕರಣದ ತನಿಖೆ ಸರಿಯಾಗಿ ಆಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.
ಅಂದು ಭಾರತಿ ಹತ್ಯೆಯ ಹಿಂದೆ ಹರಿಕೃಷ್ಣ ಬಂಟ್ವಾಳ ಅವರ ಸಂಬಂಧಿಕರಿದ್ದಾರೆ ಎಂದು ಬಿಜೆಪಿ ಹೇಳಿತ್ತು. ನಾನು ಹೇಳಿಲ್ಲ. ಆಗ ನನ್ನ ಹೆಸರನ್ನೂ ಸೇರಿಸಿ ಅಪಪ್ರಚಾರ ನಡೆಸಿ ನನ್ನನ್ನೂ ಸೋಲಿಸಿದ್ದರು. ಹರಿಕೃಷ್ಣ ಬಂಟ್ವಾಳ್ ವಿಶ್ವಾಸ ಘಾತುಕ ವ್ಯಕ್ತಿ.

ಹರಿಕೃಷ್ಣ ಬಂಟ್ವಾಳರಂತಹ ವಿಶ್ವಾಸ ಘಾತಕ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಆರೋಪಿಸಿದ ರೈ, ಚುನಾವಣೆಯಲ್ಲಿ ವಿರೋಧ ಪಕ್ಷದ ವರಿಂದ ಹಣ ಪಡೆದು ಕೊಂಡು ವಂಚನೆ ಮಾಡುವ ಹರಿಕೃಷ್ಣ ಬಂಟ್ವಾಳ್ ಮಹಾವಂಚಕ ಎಂದು ಟೀಕಿಸಿದರು.

ಶಾಸಕರ ಹೆಂಡತಿಯ ಹೆಸರಿನಲ್ಲಿ ಇರುವಂತಹ ಪರವಾನಿಗೆ ಹೆಸರಿನಲ್ಲಿ ರೆಡ್ ಬಾಕ್ಸ್ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದೇನೆ ಹೊರತು ಶಾಸಕರ ಹೆಸರು ಎಲ್ಲಿಯೂ ಹೇಳಿಲ್ಲ. ರೈತರೆನ್ನುವವರು ನಡೆಸುವ ಗಣಿಗಾರಿಕೆ ಕುರಿತಾಗಿ ಸೂಕ್ತ ದಾಖಲೆ ಸಿಕ್ಕ ಕೂಡಲೇ ಪತ್ರಿಕಾಗೋಷ್ಠಿ‌ ನಡೆಸುವುದಾಗಿ ಅವರು ತಿಳಿಸಿದರು.

ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಪ್ರತೀ ತಿಂಗಳು ಬರುತ್ತಿದ್ದ ನಾಲ್ಕು ಲಕ್ಷ ದೇವರ ಹುಂಡಿಯ ಹಣವನ್ನು ನಿಲ್ಲಿಸಿದ್ದೇನೆಯೇ ಹೊರತು ಅಕ್ಕಿ ಬರುವುದನ್ನು ನಿಲ್ಲಿಸಿಲ್ಲ ಎಂದ ಅವರು,
ತಾನು ನಿಷ್ಠಾವಂತ ಸಕ್ರೀಯ ಕಾಂಗ್ರೇಸ್ ಸದಸ್ಯನಾಗಿದ್ದು, ರಾಜಕೀಯವಾಗಿ ಜನಾರ್ದನ ಪೂಜಾರಿ ಯನ್ನು ಸೋಲಿಸಿದ ನಳಿನ್ ಕುಮಾರ್ ಜೊತೆ ಸೇರಿದ್ದು ಯಾರು ನಾನಾ ಅಥವಾ ಹರಿಕೃಷ್ಣ ಬಂಟ್ವಾಳ ರಾ ಎಂಬುದನ್ನು ಜನ ನೆನಪು ಮಾಡಲಿ.
ಹರಿಕೃಷ್ಣ ಬಂಟ್ವಾಳ ಅವರು ನನ್ನ ಪ್ರತಿ ಚುನಾವಣೆಯಲ್ಲಿ ವಂಚನೆ ಮಾಡಿದ್ದಾರೆ. ಸೋತ ಶಾಸಕರು ನಾನು ಅವರಿಗೆ ಹಣ ನೀಡಿದ್ದೇನೆ ಎಂದು ನನ್ನ ಬಳಿ ಹೇಳಿದ್ದಾರೆ.
ನನಗೆ ಮಾತನಾಡಲು ಗೊತ್ತಿದೆ ಎಂದು ಅಹಂಕಾರದಿಂದ ಮಾತನಾಡುವುದಲ್ಲ ಎಂದು ರೈ ಹರಿಕೃಷ್ಣ ಬಂಟ್ವಾಳ್ ವಿರುದ್ಧ ಟೀಕಾಪ್ರಹಾರಗೈದರು.
ಜಲೀಲ್ ಕರೋಪಾಡಿ ಕೊಲೆ ಪ್ರಕರಣದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ಹೆಸರು ಹೇಳಿದ್ದೇನೆ ಎಂದು ಶಾಸಕರೇ ಅಪಪ್ರಚಾರ ಮಾಡಿದ್ದಾರೆ. ನಾನು ಈವರೆಗೆ ಎಲ್ಲಿಯೂ ಹೇಳಿಲ್ಲ, ಪ್ರಕರಣದಲ್ಲಿದ್ದ ರಾಜೇಶ್ ನಾಯ್ಕ್ ಎನ್ನುವ ಆರೋಪಿಯ ಹೆಸರು ಉಲ್ಲೇಖಿಸಿದ್ದೇನೆ ಎಂದರು.

ಜನರಿಂದ ಚುನಾಯಿತರಾದಂತಹ ವ್ಯಕ್ತಿ ನಾನು, ಸುದೀರ್ಘ ಅವಧಿಯಲ್ಲಿ ರಾಜಕೀಯದಲ್ಲಿ ಕೆಲಸ ಮಾಡಿದ ವ್ಯಕ್ತಿ ನಾನು.
ಜನಾರ್ಧನ ಪೂಜಾರಿಗೆ ಚುನಾವಣೆಯಲ್ಲಿ ಸಮಸ್ಯೆ ಮಾಡಿದ್ದ ವಿಶ್ವಾಸ ಘಾತುಕ ವ್ಯಕ್ತಿ ಹರಿಕೃಷ್ಣ ಬಂಟ್ವಾಳ್ ರಿಂದ ಮುಂದಿನ ದಿನಗಳಲ್ಲಿ ನಳಿನ್ ಹಾಗೂ ರಾಜೇಶ್ ನಾಯ್ಕ್ ಅವರಿಗೂ ಖಂಡಿತವಾಗಿ ಯೂ ಕೆಡುಕು ಎದುರಾಗುತ್ತದೆ.‌ಅವರೂ ಎಚ್ಚರಿಕೆ ವಹಿಸಬೇಕೆಂದು ರೈ ಭಾವನಾತ್ಮಕ ವಾಗಿ ನುಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಜಿ.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಮಾಯಿಲಪ್ಪ ಸಾಲ್ಯಾನ್ ಮೊದಲಾದವರಿದ್ದರು.

More articles

Latest article