


ಬಂಟ್ವಾಳ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯ ಕೊಡುಗೆ ಬಹಳ ದೊಡ್ಡದು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆದ ಕೇಂದ್ರ ಸರಕಾರದ ಜನಪರ ಯೋಜನೆಗಳ ಮಾಹಿತಿ ಬ್ಯಾಂಕ್ ಸೇವೆಗಳ ಕುಂದು ಕೊರತೆ ನಿವಾರಣೆ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉನ್ನತ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರೇತರರು ಕಾರ್ಯನಿರ್ವಹಿಸುತ್ತಿರುವುದು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸಮಸ್ಯೆಗಳಾಗಿರುವುದು ಸಹಜ. ರಾಜ್ಯದ ಶೇ.10ರಷ್ಟು ವಿದ್ಯಾರ್ಥಿಗಳು ಮಾತ್ರ ಆಸಕ್ತಿ ವಹಿಸಿ ಪರೀಕ್ಷೆ ಬರೆಯುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಯೋಚನೆ ಮಾಡಲಾಗಿದೆ ಎಂದರು. ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಉತ್ತಮ ಸಂಬಂಧ ಗಳನ್ನು ಬೆಳೆಸಿ ವ್ಯವಹಾರ ನಡೆಸಿ ಎಂದು ಅವರು ಹೇಳಿದರು.
ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು ಮಾತನಾಡಿ, ಮೋದಿಯವರ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಬ್ಯಾಂಕ್ ನ ಅಧಿಕಾರಿಗಳು ಸಿಬ್ಬಂದಿಗಳ ಸಹಕಾರಬೇಕು ಎಂದು ಅವರು ಹೇಳಿದರು. ಸಣ್ಣ ಶಿಶುವಿನಿಂದ ಹಿಡಿದು ವೃದ್ಧರವರಗೆ ವಿವಿಧ ಜನಪರ ಯೋಜನೆಗಳನ್ನು ಕೇಂದ್ರ ಸರಕಾರದ ಪ್ರಧಾನಮಂತ್ರಿ ಜಾರಿಗೊಳಿಸಿದ್ದ ಇದರ ಪ್ರಯೋಜನವನ್ನು ಪಡೆಯುವಂತೆ ಅವರು ತಿಳಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕೊರೊನಾದಿಂದ ಕಂಗೆಟ್ಟ ಕೆಟ್ಟ ಪರಿಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಗ್ರಾಹಕರಿಗೆ ಯೋಜನೆಯ ಮೂಲಕ ಸ್ವಾವಲಂಬಿಗಳಾಗಿ ಮಾಡಲು ಪ್ರೇರಣೆ ನೀಡಿದ ಶಾಸಕರ ನಡೆ ಶ್ಲಾಘನೀಯ ಎಂದು ಹೇಳುತ್ತಾ, ಬ್ಯಾಂಕ್ ಅಧಿಕಾರಿಗಳು ದೇಶ ಸೇವಕ ಎಂಬ ಮನಸ್ಸಿನಿಂದ ಕೆಲಸ ಮಾಡಿ ಎಂದರು.
ಜಿಲ್ಲಾ ಅಗ್ರಾನಿ ಬ್ಯಾಂಕ್ ಮುಖ್ಯಸ್ಥ ಪ್ರವೀಣ್ ಬ್ಯಾಂಕ್ ನಿರ್ದೇಶನದಂತೆ ಅಭ್ಯರ್ಥಿಯೊಂದಿಗೆ ಸಮಾಲೋಚನೆ ನಡೆಸಿ ಅರ್ಜಿಗಳ ಶೀಘ್ರವಾಗಿ ವಿಲೇವಾರಿ ಮಾಡಲು ಬ್ಯಾಂಕ್ ಮ್ಯಾನೇಜರ್ ಗಳಿಗೆ ಸೂಚಿಸಿದರು. ಸರಕಾರದ ಸ್ಕೀಮ್ ಗಳ ಬಗೆಗಿನ ಅರ್ಜಿಗಳನ್ನು ತಿರಸ್ಕರಿಸುವ ಮೊದಲು ಮೇಲಾಧಿಕಾರಿಗಳ ಗಮನಕ್ಕೆ ಅಗತ್ಯವಾಗಿ ತನ್ನಿ ಎಂದು ತಿಳಿಸಿದರು. ಬ್ಯಾಂಕ್ ಗಳಲ್ಲಿ ಗ್ರಾಹಕರು ಸಿಬಿಲ್ ರೇಟಿಂಗ್ ಕಡಿಮೆಯಾಗದಂತೆ ಎಚ್ಚರಿಕೆಯಿಂದ ವ್ಯವಹಾರ ನಡೆಸಿ ಎಂದು ತಿಳಿಸಿದರು.
ಸ್ವ ಉದ್ಯೋಗ ಸ್ಕೀಮ್ ಗಳಲ್ಲಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಬ್ಯಾಂಕ್ ಸೇವೆ ಸಿಗುತ್ತಿಲ್ಲ ಮತ್ತು ಸಿಬಿಲ್ ಬಗ್ಗೆ ಅನೇಕ ದೂರುಗಳು ಗ್ರಾಹಕರಿಂದ ಸಭೆಯಲ್ಲಿ ಕೇಳಿ ಬಂದವು. ಅಧಿಕಾರಿಗಳು ಗ್ರಾಹಕರ ಸಮಸ್ಯೆಗಳಿಗೆ ಈ ಸಮಸ್ಯೆಗಳು ಯಾಕೆ ಆಗುತ್ತಿವೆ ಮತ್ತು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ತರಬೇತಿ ಕೇಂದ್ರ ಸಹಾಯಕ ನಿರ್ದೇಶಕ ವಿವೇಕಾನಂದ ಮಾಹಿತಿ ನೀಡಿದರು. ಪಿ.ಎಮ್ .ಸ್ವಾನಿದಿ ಅಭಿಯಾನ ವ್ಯವಸ್ಥಾಪಕಿ ಐರಿನ್, ಮುದ್ರಾ ಯೋಜನೆ ಬಗ್ಗೆ ವೆಂಕಟೇಶ್ ಮಾಹಿತಿ ನೀಡಿದರು.
ಭೀಮಾ ಸೌಲಭ್ಯದ ಬಗ್ಗೆ ಜಯಂತ್ ಶೆಟ್ಟಿ ಬಗ್ಗೆ ಮಾಹಿತಿ ನೀಡಿದರು.
ಆರ್ಥಿಕ ಸಾಕ್ಷರತ ಕೇಂದ್ರ ಸಮಾಲೋಚಕ ಲತೇಶ್ ಸ್ವಾಗತಿಸಿ, ಜಿಲ್ಲಾ ಲೀಡ್ ಕೇಂದ್ರದ ಸಿಬ್ಬಂದಿ ಗಿರೀಶ್ ವಂದಿಸಿದರು.





