ಜುಬೈಲ್ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ಝೋನ್ ಅಧೀನದ ಅಲ್ ಜುಬೈಲ್ ಘಟಕದ ವತಿಯಿಂದ ಡಿ.ಕೆ.ಎಸ್.ಸಿ. ಸಂಸ್ಥಾಪಕ ದಿನ, ಹುಬ್ಬುರ್ರಸೂಲ್ ಮೌಲಿದ್ ಹಾಗೂ ತಾಜುಲ್ ಫುಖಹಾ ಶೈಖುನಾ ಇಬ್ರಾಹಿಂ ಮುಸ್ಲಿಯಾರು ಬೇಕಲ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮವು ಇತ್ತೀಚೆಗೆ ಜುಬೈಲ್ ಡಿ.ಕೆ.ಎಸ್.ಸಿ. ಆಡಿಟೋರಿಯಂನಲ್ಲಿ ಜರಗಿತು.

ಡಿ.ಕೆ.ಎಸ್.ಸಿ. ಜುಬೈಲ್ ಘಟಕದ ಅಡ್ವೈಸರ್ ಹಾಗೂ ತಜ್ವೀದ್ ಕ್ಲಾಸ್ ಪ್ರಾದ್ಯಾಪಕ ಉಸ್ತಾದ್ ಅಬ್ದುಲ್ ಅಝೀಝ್ ಸಅದಿಯವರ ನೇತೃತ್ವದಲ್ಲಿ ಹುಬ್ಬುರ್ರಸೂಲ್ (ಸ.ಅ.) ಮೌಲಿದ್ ಮಜ್ಲಿಸ್ ನಡೆಯಿತು. ನಂತರ ತಮ್ಮ ಅನುಸ್ಮರಣಾ ಭಾಷಣದಲ್ಲಿ ತಾಜುಲ್ ಫುಖಹಾ ಶೈಖುನ ಬೇಕಲ ಉಸ್ತಾದರ ಜೀವನ ಶೈಲಿ ಹಾಗೂ ಅವರಿಗಿದ್ದ ಅಪಾರ ಪಾಂಡಿತ್ಯದ ಬಗ್ಗೆ ವಿವರಿಸುತ್ತಾ, ಅವರ ಅಗಲುವಿಕೆಯು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವೆಂದೂ, ಅವರ ಪಾಂಡಿತ್ಯಕ್ಕೆ ಸರಿಸಾಟಿಯಾಗುವ ವಿದ್ವಾಂಸರು ಪ್ರಸಕ್ತ ಕಾಲದಲ್ಲಿ ಸಿಗುವುದು ಕಷ್ಟವೆಂದೂ ತಿಳಿಸಿದರು.

ಡಿ.ಕೆ.ಎಸ್.ಸಿ. ಬೆಳ್ಳಿ ಹಬ್ಬ ಸಂಸ್ಥಾಪಕ ದಿನಾಚರಣೆಯ ಸವಿನೆನಪಿಗಾಗಿ ಡಿ.ಕೆ.ಎಸ್.ಸಿ. ಸ್ಥಾಪಕ ಸದಸ್ಯರಾದ ಜನಾಬ್ ಅಬ್ಬಾಸ್ ಕುಳಾಯಿ ಹಾಗೂ ಜನಾಬ್ ಅಬ್ದುಲ್ ಗಫೂರ್ ಸಜೀಪ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಜನಾಬ್ ಅಬ್ದುಲ್ ಗಫೂರ್ ಸಜೀಪರವರನ್ನು ಸುನ್ನಿ ಎಂದು ಹೇಳಲು ಭಯ ಪಡುತ್ತಿದ್ದ ಕಾಲದಲ್ಲಿ, ಉಮರಾ ನೇತಾರರಿಂದ ಸುನ್ನಿ ಸೆಂಟರ್ ಎಂಬ ಶೀರ್ಷೀಕೆ ನಾಮವನ್ನಿಟ್ಟು ಸ್ಥಾಪನೆಗೊಂಡಂತಹ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಹಲವಾರು ಕರಾಮತ್ಗಳಿರುವ ಸಂಘಟನೆಯಾಗಿದೆ. ಆದುದರಿಂದ ಪ್ರತಿಯೊಬ್ಬರು ಡಿ.ಕೆ.ಎಸ್.ಸಿ. ಗಾಗಿ ಆತ್ಮಾರ್ಥವಾಗಿ ಸೇವೆ ಗಮಾಡಬೇಕೆಂದು  ವಿನಂತಿಸುತ್ತಾ, ತಮಗಾದ ಕೆಲವು ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಸ್ಥಾಪಕ ಸದಸ್ಯ, ಅಲ್-ಹಸ್ಸ ಘಟಕದ ಮಾಜಿ ಅಧ್ಯಕ್ಷ, ಪ್ರಖ್ಯಾತ ಉದ್ಯಮಿ ಹಾಗೂ ಕೊಡುಗೈ ದಾನಿ ಜನಾಬ್ ಅಬ್ಬಾಸ್ ಕುಳಾಯಿಯವರು ತಮ್ಮ ಕೃತಜ್ಞತಾ ಭಾಷಣದಲ್ಲಿ ಸುನ್ನಿ ಸೆಂಟರ್ ನಡೆದು ಬಂದ ಹಾದಿಯನ್ನು ವಿವರಿಸಿ. ಡಿ.ಕೆ.ಎಸ್.ಸಿ. ಯಾವುದೇ ಕಾರ್ಯಕ್ಕೂ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡವೆಂದೂ ಹೇಳಿ ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಕಾರ್ಯದರ್ಶಿ ಜನಾಬ್ ಅಬೂಬಕ್ಕರ್ ಬರ್ವ ರವರು ಹಫರುಲ್ ಬಾತಿನ್ನಲ್ಲಿ ಡಿ.ಕೆ.ಎಸ್.ಸಿ. ಘಟಕವನ್ನು ಸ್ಥಾಪಿಸಿದ ಸವಿನೆನಪನ್ನು ಸವಿಸ್ತಾರವಾಗಿ ತಿಳಿಸಿದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ ಜನಾಬ್ ಏ.ಊ.ರಫೀಕ್ವರವರು ಸಂಧರ್ಬೋಚಿತವಾಗಿ ಮಾತನಾಡಿದರು.

ನಂತರ ನಡೆದ ಡಿ.ಕೆ.ಎಸ್.ಸಿ. ಜುಬೈಲ್ ಘಟಕದ ಮಾಸಿಕ ಸಭೆಯ ಅಧ್ಯಕ್ಷ ಸ್ಥಾನವನ್ನು ಘಟಕದ ಅಧ್ಯಕ್ಷ ಜನಾಬ್ ಸಮೀರ್ ಕೃಷ್ಣಾಪುರರವರು ವಹಿಸಿದ್ದರು. ಮಾಸಿಕ ವರದಿಯನ್ನು ಘಟಕದ ಪ್ರಧಾನ ಕಾರ್ಯದರ್ಶಿ ಜನಾಬ್ ಉಬೈದ್ ಸುರಿಬೈಲ್ ಹಾಗೂ ಲೆಕ್ಕ ಪತ್ರವನ್ನು ಜನಾಬ್ ಅಬ್ದುಲ್ ಗಫೂರ್ ಸಜೀಪರವರು ವಾಚಿಸಿ ಸಭೆಯ ಅನುಮೋದನೆಯನ್ನು ಪಡೆದರು.

ಬಂದ ಅತಿಥಿಗಳನ್ನು ಡಿ.ಕೆ.ಎಸ್.ಸಿ. ಬುಬೈಲ್ ಘಟಕದ ಘನ ಅಧ್ಯಕ್ಷ ಜನಾಬ್ ಸಮೀರ್ ಕೃಷ್ಣಾಪುರರವರು ಆತ್ಮೀಯವಾಗಿ ಸ್ವಾಗತಿಸಿ, ಕೊನೆಗೆ ಘಟಕದ ಕೋಶಾಧಿಕಾರಿ ಜನಾಬ್ ಅಲ್ತಾಫ್ ಬಳ್ಕುಂಜೆಯವರು ವಂದಿಸಿದರು. ಕೇಂದ್ರ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷ ಜನಾಬ್ ಯು.ಡಿ. ಅಬ್ದುಲ್ ಹಮೀದ್ ಉಳ್ಳಾಲ (ಅರಮೆಕ್ಸ್) ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here