ಬಂಟ್ವಾಳ: ಎಸ್.ಕೆ.ಎಸ್.ಎಸ್. ಎಫ್ ಪರಂಗಿಪೇಟೆ, ವಿಖಾಯ ರಕ್ತದಾನಿ ಬಳಗ ಜಿಲ್ಲಾ ಘಟಕ, ವಿಖಾಯ ರಕ್ತದಾನಿ ಬಳಗ ಮಂಗಳೂರು ವಲಯ,ವಿಖಾಯ ಪರಂಗಿಪೇಟೆ ಕ್ಲಸ್ಟರ್ ಇವರ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವ ದಲ್ಲಿ ಮುರ್ಹೂಂ ಎಫ್. ಎ.ಮಹಮ್ಮದ್ ಬಾವ ಹಾಜಿ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ಪರಂಗಿಪೇಟೆ ಇಮಾದ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಮಂಗಳೂರು ಶಾಸಕ ಯು.ಟಿ.ಖಾದರ್ ಕಾರ್ಯಕ್ರಮ ಕ್ಕೆ ಆಗಮಿಸಿ ಮಾತನಾಡಿದ ಅವರು ಪರೋಪಕಾರಿಯಾಗಿ ಸಮಾಜದ ಬಡವರ ಕಷ್ಟಸುಖಗಳಿಗೆ ಸ್ಪಂದಿಸುವ ಬಹುದೊಡ್ಡ ಜವಾಬ್ದಾರಿ ಯುತವಾದ ಕಾರ್ಯಕ್ರಮ ಗಳನ್ನು ಎಸ್.ಕೆ.ಎಸ್.ಎಸ್. ಎಫ್ ಜಂಟಿ ಸಂಘಟನೆಗಳು ಮಾಡುತ್ತಿರುವುದು ಬಹಳ ಸಂತಸ ತಂದಿದೆ ಎಂದು ಅವರು ಹೇಳಿದರು.ಕೋವಿಡ್ ಸಂದರ್ಭದಲ್ಲಿ ಸಂಘಟನೆಯ ಪಾತ್ರ ಬಹಳ ಹಿರಿದಾಗಿತ್ತು.ಸರಕಾರದ ಜೊತೆಯಲ್ಲಿ ಸಾಮಾಜಿಕ ಸಂಘಟನೆ ಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದಾಗ ಗ್ರಾಮದಲ್ಲಿ ಅಭಿವೃದ್ಧಿ ಸಾಧ್ಯ.ಇಂತಹ ಸಂಘಟನೆಯ ಉದ್ದೇಶಗಳು ಕೂಡ ಅದೇ ರೀತಿಯಲ್ಲಿ ಮುಂದುವರಿಯಲಿ.
ಸಂಘಟನೆ ಕೇವಲ ಪ್ರಚಾರದ ಅಂಗವಾಗದೆ ನೈಜವಾದ ಉದ್ದೇಶಗಳಿಗಾಗಿ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಹೇಳಿದರು

ಎಮ್ .ಜಿ.ಎಫ್ ಅದ್ಯಕ್ಷ ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ ಈ ಜಂಟಿ ಸಂಘಟನೆಗಳು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಡ ಜನರ ಕಣ್ಣೀರೊರಸುವ ಮಹತ್ಕಾರ್ಯ ಮಾಡುತ್ತಿದೆ, ಸಾಮಾಜಿಕ ಕಾರ್ಯಕರ್ತನ ಹೆಸರಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದರು.ಪರಂಗಿಪೇಟೆ ಎಮ್.ಜೆ.ಎಮ್ ಖತೀಬರಾದ ಬಹು!ಅಬ್ಬಾಸ್ ದಾರಿಮಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದೇರಳಕಟ್ಟೆ ಜಾಮಾ ಖತೀಬರಾದ ರಿಯಾಝ್ ರಹ್ಮಾನಿ ಮುಖ್ಯ ಭಾಷಣ ಮಾಡಿದರು.
ಎಸ್.ಕೆ.ಎಸ್.ಎಸ್.ಎಫ್ ಪರಂಗಿಪೇಟೆ ಕ್ಲಸ್ಟರ್ ನ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ಅಝ್ಹಹರಿ ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದರು.ಬಂಟ್ವಾಳ ಎಸ್.ಐ.ಪ್ರಸನ್ನ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‌ ಕೆಲಸ ಮಾಡಿ ಜನರ ಪ್ರಾಣ ಉಳಿಸಿದ ಸ್ಥಳೀಯ ಸುರಕ್ಷಾ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ! ಪ್ರಭಾಕರ್ ರೈ ಅವರನ್ನು ಶಾಸಕರು ವೇದಿಕೆಯಲ್ಲಿ ಗುರುತಿಸಿ ಗೌರವಿಸಿದರು.
ವೇದಿಕೆಯಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ,ಜಲಾಲಿಯನಗರ ಮಸೀದಿ ಪ್ರಧಾನ ಕಾರ್ಯದರ್ಶಿ ಶಬೀರ್ ಆಹಮ್ಮದ್ , ಎಸ್.ಕೆ.ಎಸ್.ಎಸ್.ಎಫ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಮಂಗಳೂರು ವಲಯ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣೂರು, ವಲಯ ಉಪಾಧ್ಯಕ್ಷ ನಿಯಾಝ್ ಪೈಝಿ, ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ, ಕುಂಪಣಮಜಲು ಅರಾಫಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಬುಖಾರಿ, ಎಸ್.ಕೆ.ಎಸ್. ಎಸ್.ಪರಂಗಿಪೇಟೆ ಕ್ಲಸ್ಟರ್ ಕೋಶಾಧಿಕಾರಿ ಮಜೀದ್ ಪರಂಗಿಪೇಟೆ, ಮಂಗಳೂರು ವಲಯದ ಉಸ್ತುವಾರಿ ನಝೀರ್ ವಳಚ್ಚಿಲ್, ಮಂಗಳೂರು ವಲಯ ಕೋಶಾಧಿಕಾರಿ ಆರಿಸ್ ಕುದ್ರೋಳಿ, ವಲಯ ಚೇರ್ಮನ್ ಅಪ್ಸರ್ ಪಾಷ, ಪರಂಗಿಪೇಟೆ ಕ್ಲಸ್ಟರ್ ಚೇರ್ಮನ್ ಇಮ್ರಾನ್ ಮಾರಿಪಳ್ಳ , ಎಮ್.ಜೆ.ಎಮ್ ಪರಂಗಿಪೇಟೆ ಪ್ರಧಾನ ಕಾರ್ಯದರ್ಶಿ ಯೂಸುಫ್ ಹಾಜಿ, ಕಟ್ಟಡದ ಮಾಲಕ ಇಕ್ಬಾಲ್ ಪರಂಗಿಪೇಟೆ, ಗ್ರಾ.ಪಂ.ಸದಸ್ಯರಾದಭಾಸ್ಕರ್ ರೈ , ಇಂಮ್ತಿಯಾಜ್ ತುಂಬೆ, ರಶೀದ್ ತುಂಬೆ, ಇಬ್ರಾಹಿಂ ವಳವೂರು ಉಪಸ್ಥಿತರಿದ್ದರು.

ಅರಫಾ ಜುಮಾ ಮಸೀದಿ ಖತೀಬರಾದ ಉಬೈದುಲ್ಲಾ ಅಝ್ಹರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಮುಸ್ತಫಾ ಕೌಸರಿ ಪರಂಗಿಪೇಟೆ ಸ್ವಾಗತಿಸಿ, ಪರಂಗಿಪೇಟೆ ಕ್ಲಸ್ಟರ್ ನ ಪ್ರಧಾನ ಕಾರ್ಯದರ್ಶಿ ಲತೀಪ್ ಮಲಾರ್ ವಂದಿಸಿದರು.ಆಲ್ಮಾಝ್ ಮಲಿಕ್ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here