ಮಾಣಿಲ: ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಅ.17ರಿಂದ ಆರಂಭಗೊಂಡು ಅ.26ರ ತನಕ ಶರನ್ನವರಾತ್ರಿ ಮಹೋತ್ಸವ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಾನಾ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೋವಿಡ್-19 ನಿಯಮಾನುಸಾರ ನಡೆಯಲಿದೆ.
ಅ.17 ರಂದು ಮಹಾಗಣಪರಿ ಹೋಮ, ಕೊಪ್ಪರಿಗೆ ಮುಹೂರ್ತ, ಬಳಿಕ ಚಂಡಿಕಾ ಯಾಗ ಆರಂಭಗೊಳ್ಳಲಿದೆ. ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೀಪಪ್ರತಿಷ್ಠೆ, ದುರ್ಗಾ ನಮಸ್ಕಾರ, ಲಲಿತ ಸಹಸ್ರನಾಮಾರ್ಚನೆ ನಡೆಯಲಿದೆ. ಅ.21 ರಂದು ಲಲಿತಪಂಚಮಿ ಪೂಜೆ, ಅ.23 ರಂದು ಸರಸ್ವತಿ ಪೂಜೆ, ಅ.25 ರಂದು ಮಹಾನವಮಿ, ಆಯುಧ ಪೂಜೆ ಸಂಪನ್ನಗೊಳ್ಳಲಿದೆ. ಅ.26 ರಂದು ಗಣಪತಿ ಹೋಮ, ಪಂಚಾಮೃತಾಭಿಷೇಕ, ಶ್ರೀಕುಂಭೇಶ್ವರಿ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ನವಗ್ರಹ ಶಾಂತಿ ಹವನ, ದತ್ತ ಯಾಗ, ಧನ್ವಂತರಿ ಹೋಮ, ಚಂಡಿಕಾ ಹೋಮ, ಪೂಜ್ಯ ಶ್ರೀಗಳಿಂದ ಮಧುಕರಿ ಸ್ವರ್ಣಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅ. ೨೭ ರಂದು ಪ್ರಾತಃಕಾಲ ಸೀಯಾಳಭಿಷೇಕ, ನಾಗತಂಬಿಲ ನಡೆಯಲಿದೆ.

ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ
ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅ. 17 ರಿಂದ ಅ.25ರ ತನಕ ಶ್ರೀ ಮಹಾಬಲ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇ.ಮೂ. ನಡಿಬೈಲು ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕೋವಿಡ್-19 ನಿಯಮದ ಅನ್ವಯದಂತೆ ನಡೆಯಲಿದೆ. ಪ್ರತೀದಿನ ಬೆಳಗ್ಗೆ ಶ್ರೀದೇವಿಗೆ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ರಾತ್ರಿ ನಿತ್ಯಪೂಜೆ, ಶ್ರೀ ರಕ್ತೇಶ್ವರಿ ಅಣ್ಣಪ್ಪ ಸ್ವಾಮಿಗೆ ತಂಬಿಲ ಪೂಜೆ, ಮಹಾಪೂಜೆ ನಡೆಯಲಿದೆ.

ಮಾಣಿಲ ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಅ.17 ರಿಂದ ಅ.25 ರ ತನಕ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.19 ಬೆಳಗ್ಗೆ ತೆನೆ ತುಂಬಿಸುವುದು, ಗೊನೆ ಕಡಿಯುವುದು, ಮಧ್ಯಾಹ್ನ ಮಹಾಪೂಜೆ, ಹೊಸ ಅಕ್ಕಿ ಊಟ ನಡೆಯಲಿದೆ. ಅ. 25 ರಂದು ಬೆಳಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಶ್ರೀದೇವಿಯ ದರ್ಶನ ಬಲಿಪೂಜೆ, ಶ್ರೀಚಕ್ರ ವಿತರಣೆ, ಸಂಜೆ ಆಯುಧ ಪೂಜೆ, ಶ್ರೀದೇವಿಯ ದರ್ಶನ ಪೂಜೆ, ಕುಮಾರ ಸೇವೆ, ದೊಂದಿ ಪೂಜೆ, ಶಕ್ತಿ ಪೂಜೆ ನಡೆಯಲಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here