ಬಂಟ್ವಾಳ: ಹಾಲು ಉತ್ಪಾದಕರ ಸಹಕಾರಿ ಸಂಘದ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಿಟ್ಲ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಇದರ ಕಾರ್ಯದರ್ಶಿಯಾಗಿರುವ ಎನ್.‌ ಗೋವಿಂದ್‌ ನಾಯ್ಕ್‌ ಎಂಬವರು 2013-14 ರಿಂದ 2019-20 ರ ಸಾಲಿನ ಆರ್ಥಿಕ ವರ್ಷದಲ್ಲಿ ಹಾಲು ಸರಬರಾಜು ಮಾಡಿದ ಮತ್ತು ಸರಕಾರದ ಪ್ರೋತ್ಸಾಹ ಧನದ ಸೇರಿ ಒಟ್ಟು ರೂಪಾಯಿ 4,63,623=21 ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಅವುಗಳ ಪೈಕಿ ದಿಣಾಂಕ:09-10-2019 ರಂದು ಆರೋಪಿಯು ದುರುಪಯೋಗ ಮಾಡಿರುವುದನ್ನು ಲಿಖಿತವಾಗಿ ತಪ್ಪೋಪ್ಪಿಗೆ ನೀಡಿ ರೂಪಾಯಿ 52,058,=50ನ್ನು ಸಂಘಕ್ಕೆ ಮರುಪಾವತಿ ಮಾಡಿದ್ದು, ಉಳಿಕೆ ರೂಪಾಯಿ 4,11,564=71ನ್ನು ಸಂಘಕ್ಕೆ ಪಾವತಿಸಲು ಬಾಕಿ ಇದ್ದು, ಪಿರ್ಯಾಧಿದಾರರ ಸಂಘಕ್ಕೆ ಮೋಸ, ವಂಚನೆಯನ್ನು ಮಾಡಿ ದಾಖಲೆಗಳನ್ನು ಸತತವಾಗಿ ಸೃಷ್ಠಿ ಮಾಡುತ್ತಾ ಬಂದಿರುವುದು ಮತ್ತು ಸರಕಾರದ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ತೀರ್ಥರಾಮ ಬಿ. ವಿಟ್ಲ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here