


ಮಂಗಳೂರು : ಇಂದು (ಅ.13) ಬೆಳಿಗ್ಗೆ ಬಜರಂಗದಳದ ಕಾರ್ಯಕರ್ತರು ಕಾರ್ಯಚರಣೆ ನಡೆಸಿದ್ದು, ಈ ಸಂದರ್ಭ ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಬೆಳಕಿಗೆ ಬಂದಿದೆ.
ಹಾಲು ಸಾಗಾಟ ವಾಹನದಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ತಿಳಿದ ನಂತರ, ಕಾರ್ಯಕರ್ತರು ಪಂಪ್ವೆಲ್ ನಿಂದ ಆ ವಾಹನವನ್ನು ಬೆನ್ನಟ್ಟಿದ್ದು ವೆನ್ಲಾಕ್ ಆಸ್ಪತ್ರೆಯ ಬಳಿ ತಡೆದು ಅದನ್ನು ಬಂದರ್ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಿದರು.





