

ಬಂಟ್ವಾಳ: ನಿರಂತರ ಸಮಾಜ ಸೇವೆಗಳನ್ನು ಸಕ್ರೀಯವಾಗಿ ನಡೆಸಿಕೊಂಡು ಬರುತ್ತಿರುವ ಬಂಟ್ವಾಳ ತಾಲೂಕಿನ ವಿಶ್ವ ಹಿಂದು ಪರಿಷದ್ ಭಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಇದರ 7ನೇ ಶ್ರಮದಾನ ಮಹಾಮ್ಮಾಯಿ ದೇವಸ್ಥಾನ ಕೂಡಿಬೈಲುವಿನಲ್ಲಿ ನವರಾತ್ರಿ ಉತ್ಸವ ನಡೆಯಲಿರುವುದರಿಂದ ದೇವಾಸ್ಥಾನದ ಸುತ್ತ ಮುತ್ತಲಿನ ಪ್ರದೇಶವನ್ನು ಹಾಗೂ ದೇವಸ್ಥಾನದ ವಠಾರವನ್ನು ಸ್ವಚ್ಛಗೊಳಿಸಲಾಯಿತು.
ದೇವಸ್ಥಾನ ಆಡಳಿತ ಮಂಡಳಿ ಹಾಗೂ ಊರಿನ ಜನರ ಪ್ರಶಂಸೆಗೆ ಪಾತ್ರರಾದರು ಹಾಗೂ ದೇವಸ್ಥಾನದ ಮೊಕ್ತೇಸರರು ಮಾತನಾಡಿ, ನಿಮ್ಮಿಂದ ಇನ್ನಷ್ಟು ಸಮಾಜ ಸೇವೆಗಳು ನಡೆಯಲಿ. ಮಹಾಮ್ಮಾಯಿ ದೇವರು ಸದಾಕಾಲ ನಿಮ್ಮನ್ನು ಆಶಿರ್ವದಿಸಲಿ ಎಂದು ಹರಸಿದರು. ವಿಶ್ವಹಿಂದುಪರಿಷದ್ ಭಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆಯ ಎಲ್ಲ ಕಾರ್ಯಕರ್ತರು ಶ್ರಮದಾನದಲ್ಲಿ ಬಾಗವಹಿಸಿದರು.
ಪುತ್ತೂರು ಜಿಲ್ಲೆಯ ವಿಶ್ವ ಹಿಂದು ಪರಿಷದ್ ಬಜರಂಗದಳದ ಸಹಸಂಚಾಲಕ ಗುರುರಾಜ್ ಬಂಟ್ವಾಳ ಹಾಗೂ ಬಂಟ್ವಾಳ ಪ್ರಖಂಡದ ಸಹಸಂಚಾಲಕ ಸಂತೋಷ್ ಕುಲಾಲ್ ಸರಪಾಡಿ ಉಪಸ್ಥಿತರಿದ್ದರು.







