Sunday, October 22, 2023

ಕೊರೊನಾ ಪರೀಕ್ಷೆಯನ್ನು ಯಾವ ಕಾರಣಕ್ಕೂ ನಿರಾಕರಿಸುವಂತಿಲ್ಲ: ಆರೋಗ್ಯ ಇಲಾಖೆ ಆದೇಶ

Must read

ಬೆಂಗಳೂರು: ಸರ್ಕಾರದ ಮಾರ್ಗಸೂಚಿಯ ಅನುಸಾರವಾಗಿ ಕೊರೊನಾ ಪರೀಕ್ಷೆಗೆ ಒಳಪಡಲು ಯಾರನ್ನು ಸೂಚಿಸಲಾಗುತ್ತದೆಯೋ ಅವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಯಾವ ಕಾರಣಕ್ಕೂ ಪರೀಕ್ಷೆಗೆ ನಿರಾಕರಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.
ಈ ಆದೇಶದಲ್ಲಿ, ಕೊರೊನಾ ಸೋಂಕಿತರಿಂದ ರೋಗ ಹರಡುವಿಕೆ ತಡೆಯುವ ಉದ್ದೇಶದಿಂದ ಗುರುತಿಸಲಾಗುತ್ತಿದೆ ಮತ್ತು ಇದರಿಂದ ಮರಣ ಪ್ರಮಾಣ ಕೂಡ ಕಡಿಮೆ ಮಾಡಲು ಸಾಧ್ಯ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಕೊರೊನಾ ಕಾರ್ಯದಲ್ಲಿ ನಿರತರಾಗಿರುವ ಆರೋಗ್ಯ ಸಿಬ್ಬಂದಿ, ಕಂಟೈನ್‌ಮೆಂಟ್ ಹಾಗೂ ಬಫರ್ ವಲಯದ ನಿವಾಸಿಗಳು, ಕೊರೊನಾ ಪೀಡಿತರ ಸಂಪರ್ಕಿತರಿಗೆ ಕೊರೊನಾ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕೆಲವರು ಕೊರೊನಾ ಪರೀಕ್ಷೆಗೆ ನಿರಾಕರಿಸುತ್ತಿರುವ ಪರಿಣಾಮವಾಗಿ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳು ವಿಫಲವಾಗಿತ್ತಿದೆ. ಆದ್ದರಿಂದ ಕೊರೊನಾ ಪರೀಕ್ಷೆಗೆ ಅಗತ್ಯ ಸಹಕಾರ ನೀಡಬೇಕು ಮತ್ತು ಈ ಎಲ್ಲಾ ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದೆ.

More articles

Latest article