


ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಬಿ. ಸಿ.ರೋಡ್ ನ ಮಿನಿ ವಿಧಾನಸೌಧ ಮತ್ತು ಕೋರ್ಟ್ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಪುರಸಭೆಯ ಪೌರಕಾರ್ಮಿಕರೊಂದಿಗೆ ನಡೆಸಲಾಯಿತು.
ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರೋ. ಪಿ. ಎಚ್. ಎಫ್. ಪದ್ಮನಾಭ ರೈ ಇದರ ನೇತೃತ್ವ ವಹಿಸಿದ್ಡರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಕಿಶೋರ್, ಸುಜಾತ ಪಿ. ರೈ, ಸುಪ್ರಿಯಾ ರಮೇಶ, ಆಶಾಮಣಿ ಡಿ. ರೈ, ಮಂಜುಳಾ ಶಾಂತರಾಜ್, ಸುದೀರ್ ಶೆಟ್ಟಿ, ಜ್ಯೋತಿಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಗಣೇಶ್ ಶೆಟ್ಟಿ, ಪಿ. ಎಚ್. ಎಫ್. ಶಾಂತರಾಜ್, ಪಿ.ಎಚ್.ಎಫ್. ಸತೀಶ್ ಕುಮಾರ್, ಕೇಶವ ನಾಯ್ಕ್, ಸುಂದರ್ ಬಂಗೇರ, ರಮೇಶ್ ನೆಟ್ಲ ಭಾಗಿಯಾಗಿದ್ದರು.





