



ಒಡಿಯೂರು: ಮಂಗಳೂರು ಲೈಟ್ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಅಧಿಕೃತವಾಗಿ ನಾಮಕರಣಗೊಳಿಸಿದ ಕರ್ನಾಟಕ ಸರಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ ಪಾಂಡೇಶ್ವರ ಮತ್ತು ಕಾರ್ಪೋರೇಟರ್ಗಳಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಅಭಿನಂದನೆ ಸಲ್ಲಿಸಿದ್ದಾರೆ.
ತುಳುನಾಡಿನ ಜನಪ್ರಿಯ ಬ್ಯಾಂಕ್ಗಳಲ್ಲಿ ಒಂದಾದ ವಿಜಯಾ ಬ್ಯಾಂಕ್ ಸ್ಥಾಪಕರಾದ ಸುಂದರರಾಮ ಶೆಟ್ಟಿ ಅವರು ತಮ್ಮ ಸಾಮಾಜಿಕ ಕಳಕಳಿ ಮತ್ತು ಆರ್ಥಿಕ ತಜ್ಞತೆಯಿಂದ ಬ್ಯಾಂಕನ್ನು ಗಣನೀಯವಾಗಿ ಅಭುವೃದ್ಧಿಪಡಿಸಿದರಲ್ಲದೇ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಶ್ರೇಷ್ಠ ಉದ್ಯೋಗಪತಿ. ವಿಜಯಾಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾದರೂ ಮಂಗಳೂರು ರಸ್ತೆಗೆ ಸುಂದರರಾಮ ಶೆಟ್ಟಿಯವರ ಹೆಸರು ನಾಮಕರಣದಿಂದ ಅವರ ಮತ್ತು ವಿಜಯಾ ಬ್ಯಾಂಕ್ನ ಹೆಸರು ತುಳುನಾಡಿನಲ್ಲಿ ಸ್ಥಿರಸ್ಥಾಯಿಯಾಗಿದೆ ಎಂದು ಪೂಜ್ಯ ಶ್ರೀಗಳವರು ಸಂತಸ ವ್ಯಕ್ತಪಡಿಸಿದ್ದಾರೆ.






