ಮಂಗಳೂರು : ರಾಜ್ಯದಲ್ಲಿ “ಡ್ರಗ್ಸ್” ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ದ.ಕ. ಜಿಲ್ಲೆಯನ್ನು ಒಂದು ತಿಂಗಳಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿರುವ ಪಬ್‌ಗಳು ಮುಚ್ಚಬೇಕು. ಪಬ್, ಕ್ಲಬ್ ಎಲ್ಲವನ್ನೂ ಬಂದ್ ಮಾಡಿ ಆದೇಶ ನೀಡಬೇಕು. ಈ ಹಿಂದೆ ನಮ್ಮ ಕಾಲಘಟ್ಟದಲ್ಲಿ ವೀಡಿಯೋ ಗೇಮ್ ಕ್ಲಬ್ ನಿಲ್ಲಿಸಿದ್ದೇವೆ. ಸದ್ಯ ಕಮೀಷನರ್‌ಗೆ ಪಬ್ ನಿಲ್ಲಿಸಲು ಸೂಚಿಸಲಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳದೇ ಇದ್ದರೆ, ಬಿಜೆಪಿ ಯುವಮೋರ್ಚಾಗೆ ಹೇಳಿದ್ದೇನೆ, ಕಾನೂನು ಹೋರಾಟ ನಡೆಸಲಿದೆ. ವಕೀಲರನ್ನು ಹಿಡಿದು ಹೈಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ಮಾಡಲಿದ್ದಾರೆ ಎಂದರು.
ವಿದ್ಯಾರ್ಥಿಗಳು ಹಾಳಾಗುವುದಕ್ಕೆ ಅವಕಾಶವಿಲ್ಲ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಯಾವುದೇ ಚಟುವಟಿಕೆಗಳಿಗೆ ಬಿಜೆಪಿ ಸರಕಾರ ಅನುಮತಿ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here