

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ನೆರೆವೇರಿಸಿದರು.
ಮುಖ್ಯವಾಗಿ ಕಿಲ್ತೋಡಿ ಮಲೆಬಾವು ರಸ್ತೆ-5 ಲಕ್ಷ, ಮೈಂದಾಲ ಕೋಟಿಪಾಲು ರಸ್ತೆ 5 ಲಕ್ಷ, ಅಜ್ಜಂಕೋಡಿ ಪರ್ಲ ರಸ್ತೆ 10 ಲಕ್ಷ, ಪೊಲೋಡಿ ಮಲೆಬಾವು ರಸ್ತೆ 25 ಲಕ್ಷ, ಬೋವಿನಪಾಡಿ ಕ್ವಾರ್ಟಸ್ ರಸ್ತೆ 10 ಲಕ್ಷ, ದೇವಸ್ಯಪಡೂರು ಗ್ರಾಮದ ಕೇದಿಗೆ ನೂಜೆ ರಸ್ತೆ 10 ಲಕ್ಷ ಮುಂತಾದ ಕಾಮಾಗಾರಿಗಳಿಗೆ ಶಿಲನ್ಯಾಸ ಮತ್ತು ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸದಾನಂದ ಹಳೆಗೇಟು, ಶಾಂತವೀರ ಪೂಜಾರಿ, ಜನಾರ್ಧನ ಕೊಂಬೆಟ್ಟು, ಸುದರ್ಶನ್ ಬಜ, ಸೀತರಾಮ ಗೌಡ, ವಿಜಯ ಕುಮಾರ್, ಯೋಗಿಶ್ ಪಟ್ಲ, ಶ್ರೀಮತಿ ವಿಲಾಸಿನಿ, ಶೀಲ, ಸುರೇಖ, ಜಯಂತಿ, ರಾಜೀವಿ, ಜೆಸಿಂತಾ ವಾಸ್, ಶೇಖರ ಪೂಜಾರಿ, ಪದ್ಮನಾಭ ಕೆಂಪುಗುಡ್ಡೆ, ಜಯರಾಮ ಗೌಡ, ಸಂಪತ್ ಕುಮಾರ್, ಪ್ರವೀಣ್ ಕುಮಾರ್, ಮನ್ಮಥ್ ರಾಜ್ ಜೈನ್, ಆದಿರಾಜ್ ಜೈನ್, ಶಾಂತಿ ಪ್ರಸಾದ್, ವಿಠಲ ಕೊಟ್ಯಾನ್, ಜಿನೇಂದ್ರ ಜೈನ್ ಉಪಸ್ಥಿತರಿದ್ದರು.







