ಬಂಟ್ವಾಳ : ಎಸೆಸೆಲ್ಸಿ ಉತ್ತರಪತ್ರಿಕೆ ಮೌಲ್ಯಮಾಪನದ ಅನಾಹುತಕ್ಕೆ ಕಾರಣವಾಗಿರುವ ಮೌಲ್ಯಮಾಪಕರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ವತಿಯಿಂದ ಬಿ.ಸಿ.ರೋಡು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಬಳಿಕ ಮೌಲ್ಯಮಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರ ಮೂಲಕ ರಾಜ್ಯ ಶಿಕ್ಷಣ ಸಚಿವರಿಗೆ ಮನವಿ ನೀಡಲಾಯಿತು.

ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಎಂ.ಪ್ರಭಾಕರ ದೈವಗುಡ್ಡೆ, ಕಾರ್ಯದರ್ಶಿ ಬಿ.ಶೇಖರ್, ಪ್ರಮುಖರಾದ ಹಾರೂನ್ ರಶೀದ್, ಪ್ರೇಮನಾಥ ಕೆ, ಶ್ರೀನಿವಾಸ ಭಂಡಾರಿ, ಪ್ರಕಾಶ್ ಬಿ.ಶೆಟ್ಟಿ ತುಂಬೆ, ಸುರೇಶ್, ಇಸ್ಮಾಯಿಲ್ ಅರಬಿ ಕೆಳಗಿನಪೇಟೆ, ಶಾಫಿ ಕೆಳಗಿನಪೇಟೆ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here