Thursday, October 19, 2023

ಗ್ರಾಮದ ಅಭಿವೃದ್ಧಿ ಸರಕಾರದ ಮೂಲ ಧ್ಯೇಯ: ಶಾಸಕ ರಾಜೇಶ್ ನಾಯ್ಕ್

Must read

ಬಂಟ್ವಾಳ: ಗ್ರಾಮದ ಅಭಿವೃದ್ಧಿ ಸರಕಾರದ ಮೂಲ ಮಂತ್ರವಾಗಿದ್ದು, ಗ್ರಾಮದ ಜನರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಕರೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 7 ಕೋಟಿ 5 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು. ಗ್ರಾಮದಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಜನರ ನಿರೀಕ್ಷೆಯಂತೆ ಕೆಲಸ ಮಾಡುವ ಭರವಸೆ ನೀಡಿದರು. ಗ್ರಾಮದ ಮೂಲಭೂತ ಸೌಕರ್ಯಗಳ ಜೊತೆ ವಿವಿಧ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಜನರು ನೀಡಿದ ಅಧಿಕಾರದಿಂದ ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಪ್ರದಾನಮಂತ್ರಿ ಮತ್ತು ಮುಖ್ಯಮಂತ್ರಿಯವರ ನಾಯಕತ್ವದ ಅಡಿಯಲ್ಲಿ ಅವರ ಸಹಕಾರದಿಂದ ಇನ್ನಷ್ಟು ತಾಲೂಕಿನ ಅಭಿವೃದ್ಧಿಪಡಿಸಲು ಸಿದ್ದವಾಗಿದ್ದು, ಗ್ರಾಮದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮಿಜಿ ಮಾತನಾಡಿ, ಗ್ರಾಮದ ವಿಕಾಸವಾದರೆ ರಸ್ತೆ ಅಭಿವೃದ್ಧಿಯಾಗಬೇಕು. ರಸ್ತೆ ಅಭಿವೃದ್ಧಿಯಾದರೆ ಗ್ರಾಮ ಅಭಿವೃದ್ಧಿಯಾಗುತ್ತದೆ. ಆದರೆ ರಸ್ತೆಯ ಅವಶ್ಯಕತೆಗಳಿರುವುದನ್ನು ಗುರುತಿಸಿ ಪೂರಕವಾದ ಯೋಜನೆ ರೂಪಿಸಿದಾಗ ಗ್ರಾಮದ ಅಭಿವೃದ್ಧಿ ಜೊತೆಗೆ ರಾಷ್ಟ್ರದ ಅಭಿಯಾಗುತ್ತದೆ ಎಂದು ಅವರು ಹೇಳಿದರು.

ಕರೋಪಾಡಿ ಗ್ರಾ.ಪಂ. ವ್ಯಾಪ್ತಿಯ 2.25 ಕೋಟಿ ವೆಚ್ಚದಲ್ಲಿ ಪಳ್ಳದಕೋಡಿ, ಪದ್ಯಾಣ ರಸ್ತೆ, 60 ಲಕ್ಷ ವೆಚ್ಚದಲ್ಲಿ ಅರಸಳಿಕೆ, ವಗೆನಾಡು ರಸ್ತೆ ಮರುಡಾಮರಿಕರಣ, 75 ಲಕ್ಷ ವೆಚ್ಚದಲ್ಲಿ ಶ್ರೀ ಜಲ ದುರ್ಗಾಪರಮೇಶ್ವರೀ ದೇವಸ್ಥಾನ ಪಡ್ಪು, ಆನೆಕಲ್ಲು ಬಳಿ ನದಿಗೆ ತಡೆಗೋಡೆ, 10 ಲಕ್ಷ ವೆಚ್ಚದಲ್ಲಿ ಪಾಲಿಗೆ, ನಲಿಕೆ ಕಾಲೋನಿ ರಸ್ತೆ, ಕಾಂಕ್ರೀಟಿಕರಣ, 15 ಲಕ್ಷ ವೆಚ್ಚದಲ್ಲಿ ಚೆಲ್ಲಂಗಾರು ಪರಿಶಿಷ್ಟ ಪಂಗಡ ಕಾಲೋನಿ ರಸ್ತೆಗೆ, 5 ಲಕ್ಷ ವೆಚ್ಚದಲ್ಲಿ ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನದ ಮುಂಭಾಗದಲ್ಲಿ ಒಳಚರಂಡಿ ರಚನೆ, 5 ಲಕ್ಷ ವೆಚ್ಚದಲ್ಲಿ ಒಡಿಯೂರು,ಬನಾರಿ ಸಂಪರ್ಕ ರಸ್ತೆ,30 ಲಕ್ಷ ವೆಚ್ಚದಲ್ಲಿ ಪಾದೆಕಲ್ಲು- ಪೆರ್ವೋಡಿ ಸಂಪರ್ಕ ರಸ್ತೆ, 10 ಲಕ್ಷ ವೆಚ್ಚದಲ್ಲಿ
ವಗೆನಾಡು, ಪಂಬತ್ತಾಜೆ ರಸ್ತೆ, 5ಲಕ್ಷ ವೆಚ್ಚದಲ್ಲಿ ದೇವಸ್ಯ, ಪಟ್ಲ, ಪರಂದರಮೂಲೆ ರಸ್ತೆ, 1.25 ಲಕ್ಷ ವೆಚ್ಚದಲ್ಲಿ ಕುಡ್ಪಲ್ತಡ್ಕ ಹೈಮಾಸ್ಟ್ ದೀಪ, 1.25ಲಕ್ಷ ವೆಚ್ಚದಲ್ಲಿ ಬೆಂಗದಪಡ್ಪು ಹೈಮಾಸ್ಟ್ ದೀಪ ಉದ್ಘಾಟನೆ, 1.25 ಲಕ್ಷ ವೆಚ್ಚದಲ್ಲಿ ಒಡಿಯೂರು,ಶ್ರೀ ಗುರುದೇವ್ ದತ್ತ ಸಂಸ್ಥಾನ ಹೈಮಾಸ್ಟ್, 1.25 ಲಕ್ಷ ವೆಚ್ಚದಲ್ಲಿ ಶ್ರೀ ರಾಜರಾಜೇಶ್ವರೀ ಭಜನಾ ಮಂದಿರ ಬೇಡಗುಡ್ಡೆ ರಸ್ತೆಯ ಉದ್ಘಾಟನೆ ನಡೆಯಿತು.

ಅನುದಾನ ಬಿಡುಗಡೆಯಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳಾದ 1ಕೋಟಿ ವೆಚ್ಚದಲ್ಲಿ ಕಮ್ಮಾಜೆಯಿಂದ ಶ್ರೀ ಗುರುದೇವ ಸಂಸ್ಥಾನ ಒಡಿಯೂರು ರಸ್ತೆ, 1 ಕೋಟಿ ವೆಚ್ಚದಲ್ಲಿ ಬೇತಾ, ಮುಗುಳಿ ರಸ್ತೆ ಕಾಂಕ್ರೀಟಿಕರಣ, 30 ಲಕ್ಷ ವೆಚ್ಚದಲ್ಲಿ ಪದ್ಯಾಣ ಗಡಿಜಾಗೆ ಕಲ್ಲುರ್ಟಿ ದೈವಸ್ಥಾನ ರಸ್ತೆ, 10 ಲಕ್ಷ ವೆಚ್ಚದಲ್ಲಿ ಬೇತಾ,ಪಾದೆಕಲ್ಲು ರಸ್ತೆಗೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕರೋಪಾಡಿ ಗ್ರಾ.ಪಂ. ಮಾಜಿ ಆಧ್ಯಕ್ಷೆ ಬೇಬಿ ಆರ್. ಶೆಟ್ಟಿ, ಸಾಲೆತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷೆ ಚಂದ್ರವಾತಿ ಮಲಾರ್, ಎಸ್.ಟಿ. ಮೋರ್ಚಾದ ಆಧ್ಯಕ್ಷ ರಾಮನಾಯ್ಕ್, ಜಲದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲಕೃಷ್ಣ ಭಟ್ ಬೇತ, ರೈತಮೋರ್ಚಾ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಅಗರಿ, ಕನ್ಯಾನ ಗ್ರಾ.ಪಂ. ಮಾಜಿ ಅಧ್ಯಕ್ಷ ರಘರಾಮ ಶೆಟ್ಟಿ ಕನ್ಯಾನ, ಮಾಜಿ ಜಿ.ಪಂ. ಸದಸ್ಯ ಲಿಂಗಪ್ಪ ಗೌಡ, ಕರೋಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ವಿಘ್ನೇಶ್ವರ ಭಟ್, ಉಪಾಧ್ಯಕ್ಷ ಪಟ್ಲ ರಘನಾಥ ಶೆಟ್ಟಿ, ಪ್ರಮುಖರಾದ ಜಯರಾಮ್ ಮಿತ್ತನಡ್ಕ, ಲಕ್ಷಣ ಮಾಂಬಾಡಿ, ಆಶ್ವತ್ ಶೆಟ್ಟಿ, ಶಶಿಕಿರಣ್ ಶೆಟ್ಟಿ, ಸುನಿಲ್ ಪದ್ಯಾಣ, ರಂಜಿತ್ ಪಾಲಿಗೆ, ಆದರ್ಶ ಶೆಟ್ಟಿ ಪಟ್ಲ, ಜಯರಾಮ ನಾಯ್ಕ, ರಾಮಕೃಷ್ಣ ಮಲಾರ್, ರಾಜೇಶ್ ಮಿತ್ತನಡ್ಕ, ದಾಮೋದರ ಶೆಟ್ಟಿ, ಸಂಕಪ್ಪ ಶೆಟ್ಟಿ ಪಲ್ಲದಕೋಡಿ, ದಿನೇಶ್ ಮಿತ್ತನಡ್ಕ, ರಾಜೇಶ್ ಮಿತ್ತನಡ್ಕ, ಸುದರ್ಶನ ಆಳ್ವ, ವಿನೋದ್ ಶೆಟ್ಟಿ ಪಟ್ಲ, ಪುರಂದರ ಚೆಲ್ಲಂಗಾರ್, ಬಾಲಕೃಷ್ಣ ಚೆಲ್ಲಂಗಾರ್, ಶಾರದ ಚೆಲ್ಲಂಗಾರ್
ರಮನಾಥ ರಾಯಿ, ಗಣೇಶ್ ರೈ ಮಾಣಿ, ಬಾಲಕೃಷ್ಣ ಸೆರ್ಕಳ, ವಿದ್ಯೇಶ್ ರೈ ಸಾಲೆತ್ತೂರು, ವಿಕ್ಟರ್, ಲೋಕೋಪಯೋಗಿ ಇಲಾಖೆ ಹಿರಿಯ ವಿಭಾಗದ ಇಂಜಿನಿಯರ್ ಷನ್ಮುಗಂ, ಕಿರಿಯ ವಿಭಾಗದ ಇಂಜಿನಿಯರ್ ಪ್ರೀತಂ, ಸಣ್ಣ ನೀರಾವರಿ ಇಲಾಖೆ ಯ ಇಂಜಿನಿಯರ್ ಶಿವಪ್ರಸನ್ನ ಉಪಸ್ಥಿತರಿದ್ದರು.

ಕೊಳ್ನಾಡು ಮಹಾ ಶಕ್ತಿ ಕೇಂದ್ರ ಆದ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು.

More articles

Latest article