Tuesday, October 17, 2023

ದ.ಕ. ಜಿಲ್ಲೆಯಲ್ಲಿ 310 ಕೊರೊನಾ ಸೋಂಕು ಪತ್ತೆ: 256 ಮಂದಿ ಗುಣಮುಖ

Must read

ಬಂಟ್ವಾಳ : ದ.ಕ. ಜಿಲ್ಲೆಯಲ್ಲಿ 310 ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ
15762 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತರ ಪೈಕಿ 82 ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 236 ಐಎಲ್‌ಐ, 18 ಎಸ್‌ಎಆರ್‌ಐ ಪ್ರಕರಣ ದಾಖಲಾಗಿದೆ. ಇನ್ನುಳಿದ 46 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ಇಂದು ಜಿಲ್ಲೆಯಲ್ಲಿ 256 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 11,986 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3102 ಸಕ್ರೀಯ ಪ್ರಕರಣಗಳಿವೆ.
ಇಂದು 6 ಮಂದಿ ಕೊರೊನಾ ಸೋಂಕಿಗೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 418 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತರ ತಾಲೂಕುವಾರು ವಿವರ:
ಮಂಗಳೂರಿನ 188 ಮಂದಿಗೆ, ಬಂಟ್ವಾಳ 27, ಪುತ್ತೂರು 25, ಸುಳ್ಯ 6, ಬೆಳ್ತಂಗಡಿ 26 ಹಾಗೂ ಹೊರ ಜಿಲ್ಲೆಯ 19 ಮಂದಿಗೆ ಸೋಂಕು ದೃಢಪಟ್ಟಿದೆ.

More articles

Latest article