Thursday, October 19, 2023

ಎದೆ ಮಾತು

Must read

ಕಣ್ಣ ಕೊಳದಲದೋ
ನಮ್ಮೊಲವ ಬಾತು
ಅವುಗಳೇ ಹೇಳುತಿವೆ
ನನ್ನೆದೆಯ ಮಾತು

ಬಾನ ಸಾಗರದಲ್ಲಿ
ನೀ ಹೊಳೆವ ತಾರೆ
ಬೆಳದಿಂಗಳಮಲಿನಲಿ
ನಿರುಕಿಸುವೆ ಬಾರೆ

ಸೊಂಪಾದ ತಣ್ಣೆಳಲು
ನಿನ್ನ ಎದೆ ಬನದಿ
ಬಿರುಬಿಸಿಲು ಅಲ್ಲಿರಲಿ
ವಿರಹ ಕಾನನದಿ

ಮಿರುಗುವಾ ಚಂದ್ರನ
ನಗೆಯಾಟ ನೋಡು
ಮೋಡಗಳ ಹಿಗ್ಗಿನಲಿ
ನಮ್ಮೊಲವ ಹಾಡು

ನದಿ ದಡದಿ ಸೊಗಸು
ನವಿಲ ನಲಿದಾಟ
ಹಕ್ಕಿಗಳ ಕಲರವವು
ಅದು ರಮ್ಯ ನೋಟ

ಒಂಟಿ ಪಯಣ ಸಾಕಿನ್ನು
ಜೊತೆಯಾಗಿ ಇರುವ
ವರುಷದಿ ಕಂದನ ಕೇಕೆ
ಮಡಿಲಲ್ಲೆ ತರುವ

✍ ನೀ.ಶ್ರೀಶೈಲ ಹುಲ್ಲೂರು

More articles

Latest article