ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಉಳಿ ಗ್ರಾಮ ಸಮಿತಿಯ ವತಿಯಿಂದ ಇಂದು ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರದಾನ ಕಾರ್ಯದರ್ಶಿ ದೊಂಬಯ್ಯ ಅರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಗ್ರಾಮ ಸಮಿತಿ ವತಿಯ ಆಯುಷ್ಮನ್ ಕಾರ್ಡ್ ಅಭಿಯಾನ ಕಾರ್ಯಕ್ರಮ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿಯವರ ಮತ್ತು ಮುಖ್ಯಮಂತ್ರಿ ಯವರ ಬಡವರ ಪರ ಇರುವ ಯೋಜನೆಗಳನ್ನು ಭಾರತೀಯ ಜನತಾ ಪಕ್ಷದ ಗ್ರಾಮ ಸಮಿತಿಯ ಕಾರ್ಯಕರ್ತರು ಮನೆಮನೆಗೆ ತಲುಪಿಸಿ ಬಡವರಿಗೆ, ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ಸಿಗುವಂತೆ ನೋಡಿಕೋಳ್ಳಬೇಕು ಹಾಗೂ ಶಾಸಕ ರಾಜೇಶ್ ನಾಯ್ಕರ ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳು ಜನರ ಮನೆ ಮನ ಮುಟ್ಟುವ ಕೆಲಸ ಕಾರ್ಯ ಮಾಡಬೇಕೆಂದು ವಿನಂತಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷ ಚಿದಾನಂದ ರೈ, ಕ್ಷೇತ್ರದ ಮಾದ್ಯಮ ಪ್ರಮುಖ ರಂಜಿತ್ ಮೈರಾ, ಮಹಾಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ಹರೀಶ್ ಪ್ರಭು, ಬಿಜೆಪಿ ಪ್ರಮುಖರಾದ ಸುರೇಶ್ ಮೈರ, ವಸಂತ್ ರಾಮನಗರ, ಚೇತನ್ ಉರುದೊಟ್ಟು, ಯುವ ಮೋರ್ಚಾದ ಪ್ರಮುಖ ಸುರೇಂದ್ರ ಕಂಚಲ ಪಲ್ಕೆ, ರೋಹಿನಾಥ್ ಕಕ್ಯಪದವು, ಹೊನ್ನಪ್ಪ ಮುದಲಾಡಿ, ಚಂದ್ರಪೂಜಾರಿ, ಸದಾನಂದ ಗೌಡ ಉಪಸ್ಥಿತರಿದ್ದರು. ಪ್ರಕಾಶ್ ಕರ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here