Thursday, October 26, 2023

ಕುಕ್ಕಾಜೆ: ಮದರಸ ವಿದ್ಯಾರ್ಥಿಗೆ ಅಭಿನಂಧನೆ

Must read

ಬಂಟ್ವಾಳ: ಇರಾ ಗ್ರಾಮದ ಕುಕ್ಕಾಜೆ ಬೈಲ್ ಮದರಸ ಟ್ಯೂಷನ್ ಕ್ಲಾಸಿನಲ್ಲಿ ಕಲಿತು ಮದರಸ ಪರೀಕ್ಷೆಯಲ್ಲಿ ಶೇ. 100 ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ ಶಾಹಿದ್ ಕುಕ್ಕಾಜೆ ಬೈಲ್ ಎಂಬ ವಿದ್ಯಾರ್ಥಿಯನ್ನು ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಕುಕ್ಕಾಜೆ ಮಸೀದಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ತೋಟ ,ಅಬ್ಬಾಸ್ ಮುಸ್ಲಿಯಾರ್, ಉಮ್ಮರ್ ಮುಸ್ಲಿಯಾರ್, ಸಿದ್ದೀಕ್ ಫಾಲಿಲಿ ಕುಕ್ಕಾಜೆ, ಉಮರ್ ಫಾರೂಕ್ ಮುಸ್ಲಿಯಾರ್, ಮೊಹಮ್ಮದ್ ಕೆ, ಅಬ್ದುಲ್ ರೆಹಮಾನ್ ತೋಟ,ಇಬ್ರಾಹಿಂ ಕೆ,ಖಲೀಲ್ ಕೆ,ಹಂಝ ,ಇಬ್ರಾಹಿಂ ಬೈಲ್ ಇನ್ನಿತರರು ಉಪಸ್ಥಿತರಿದ್ದರು.

ಮದರಸ ಅಧ್ಯಾಪಕ ಅಬೂಬಕ್ಕರ್ ಸಿದ್ದಿಕ್ ಮುಸ್ಲಿಯಾರ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

More articles

Latest article