

ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 414 ಕೋವಿಡ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ ಸೋಂಕಿತರ ಪೈಕಿ 77 ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 150 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುವುದು.
ಇಂದು ಜಿಲ್ಲೆಯಲ್ಲಿ 346 ಮಂದಿ ಗುಣಮುಖರಾಗಿದ್ದು, ಒಟ್ಟು 10, 498 ಮಂದಿ ಗುಣಮುಖರಾದ ಬಗ್ಗೆ ವರದಿಯಾಗಿದೆ. ಪ್ರಸ್ತುತ 2600 ಸಕ್ರೀಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,479 ಕ್ಕೆ ಏರಿಕೆಯಾಗಿದೆ. ಒಟ್ಟು 381 ಮಂದಿ ಮೃತಪಟ್ಟಿದ್ದಾರೆ.
ಇಂದಿನ ಸೋಂಕಿತರ ವಿವರ:
ಮಂಗಳೂರಿನ 222, ಬಂಟ್ವಾಳ 64, ಪುತ್ತೂರು 49, ಸುಳ್ಯ 31, ಬೆಳ್ತಂಗಡಿ 28 ಹಾಗೂ ಹೊರ ಜಿಲ್ಲೆಯಲ್ಲಿ 20 ಮಂದಿಗೆ ಸೋಂಕು ತಗಲಿರುವ ಬಗ್ಗೆ ಮಾಹಿತಿ ಇದೆ.







