ಮುರುಡೇಶ್ವರ: ನಿನ್ನೆ ಮುರುಡೇಶ್ವರಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದ ಎರಡು ವಿಭಿನ್ನ ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿದ್ದಾರೆ. ಅವರಲ್ಲಿ ಒಬ್ಬರು ಬೆಂಗಳೂರಿನವರಾಗಿದ್ದು, ಇನ್ನೊಬ್ಬರು ಶಿವಮೊಗ್ಗ ಜಿಲ್ಲೆಯ ಸೊರಬದವರೆಂಬ ಮಾಹಿತಿ ಇದೆ.
ಮೃತ ಯುವಕ ಅಭಿಜಿತ್ (24) ಅವರು ಬೆಂಗಳೂರಿನ ಯಲಹಂಕ ನ್ಯೂಟೌನ್ ನವರಾಗಿದ್ದು, ಎಲೆಕ್ಟ್ರಾನಿಕ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮತ್ತೊರ್ವ ಮೃತ ಯುವಕ ಶರತ್ ಜಗದೀಶ್ ಬಳ್ಳಾರಿ (18) ಶಿವಮೊಗ್ಗ ಜಿಲ್ಲೆಯ ಸೊರಬದ ಹಳೆಬ್ಸೊರಬದ ಜಯಂತಿವಾಡ ಮೂಲದವನು. ಎರಡೂ ಶವಗಳನ್ನು ಸಮುದ್ರದಿಂದ ಎತ್ತಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here