ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 334 ಹೊಸ ಕೋವಿಡ್ ಕೇಸ್ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 12,443 ಕ್ಕೆ ಏರಿಕೆಯಾಗಿದೆ.
ಇಂದಿನ ಸೋಂಕಿತರ ಪೈಕಿ 68 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 112 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುವುದು.
ಇಂದು ಜಿಲ್ಲೆಯಲ್ಲಿ 6 ಸೋಂಕಿತರ ಸಾವು ಸಂಭವಿಸಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 356 ಆಗಿದೆ.
ಇಂದು 213 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು 9422 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 2665 ಸಕ್ರೀಯ ಪ್ರಕರಣಗಳಿವೆ.
ಜಿಲ್ಲೆಯ ಪ್ರತಿ ತಾಲೂಕುಗಳ ಸೋಂಕಿತರ ಇಂದಿನ ವಿವರ:
ಮಂಗಳೂರಿನ 191, ಬಂಟ್ವಾಳ 78, ಪುತ್ತೂರು, ಬೆಳ್ತಂಗಡಿ ತಲಾ 20 ಸುಳ್ಯ 6 ಹಾಗೂ ಹೊರ ಜಿಲ್ಲೆಯ 19 ಮಂದಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here