



ಬಂಟ್ವಾಳ: ಅಕ್ರಮವಾಗಿ ಟೆಂಪೋ ರಿಕ್ಷಾದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಆರೋಪಿ ಸಹಿತ ದನಗಳನ್ನು ವಶಕ್ಕೆ ಪಡದುಕೊಂಡಿದ್ದಾರೆ.
ಮಂಚಿ ಸಮೀಪದ ಇರಾ ಗ್ರಾಮದ ಕುಂಡಾವು ಎಂಬಲ್ಲಿ
ಒಂದು ಎತ್ತು ಹಾಗೂ ಒಂದು ಕರುವನ್ನು ಅಕ್ರಮವಾಗಿ ವದೆ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದ್ದ ಪೋಲೀಸರಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಾರೆ.
ಖಚಿತ ಮಾಹಿತಿ ಅಧಾರದಲ್ಲಿ ದಾಳಿ ನಡೆಸಿದ ಪೋಲೀಸರು
ಇರಾ ನಿವಾಸಿ ಚಾಲಕ ಇಬ್ರಾಹಿಂ ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಇನ್ನೋರ್ವ ಆರೋಪಿ ಕುಕ್ಕಾಜೆ ನಿವಾಸಿ ಮುನೀರ್ ಎಂಬಾತ ದಾಳಿ ವೇಳೆ ಪರಾರಿಯಾಗಿದ್ದು ಆತನ ಮೇಲೆ ಪ್ರಕರಣ ದಾಖಲಿಸಿದ್ದು ಆತನ ವಶಕ್ಕೆ ಬಲೆಬೀಸಿಲಾಗಿದೆ.
ಆರೋಪಿಗಳಿಂದ 1,54,500 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕುಕ್ಕಾಜೆ ಯಿಂದ ಇರಾ ಕಡೆಗೆ ದನಗಳನ್ನು ದನಗಳನ್ನು ಹಿಂಸಾತ್ಮಕ ವಾಗಿ ಸಾಗಾಟ ಮಾಡಲಾಗುತ್ತಿದ್ದ ಬಗ್ಗೆ ಪೋಲೀಸರಿಗೆ ಮಾಹಿತಿ ಲಭ್ಯವಾಗಿತ್ತು.
ಡಿ.ವೈ.ಎಸ್. ಪಿ.ವೆಲೆಂಟೈನ್ ಡಿ.ಸೋಜ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಎಸ್. ಐ.ಸಂಜೀವ ಕೆ ಅವರ ತಂಡ ದಾಳಿ ನಡೆಸಿ ದನ ಸಾಗಾಟದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.






