ಪುತ್ತೂರು: ಇಲ್ಲಿನ ಕೊಂಬೆಟ್ಟುವಿನಲ್ಲಿ ನೀರು ತುಂಬಿದ ಬಕೆಟ್ ವೊಂದಕ್ಕೆ ಮಗು ಬಿದ್ದು, ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಆ. 26 ರಂದು ಪುತ್ತೂರು ತಾಲೂಕಿನ ಕೊಂಬೆಟ್ಟು ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಆ.26 ರಂದು ಸಂಜೆ ಮನೆಮಂದಿ ಎಲ್ಲಾರು ಮನೆಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಹೆಣ್ಣು ಮಗುವೊಂದು ಮನೆಯಲ್ಲಿ ನೀರು ತುಂಬಿಸಿಟ್ಟ ಬಕೆಟ್ ಗೆ ಬಿದ್ದಿದೆ. ಆದರೆ ಈ ಬಗ್ಗೆ ಮನೆಯವರಿಗೆ ತಡವಾಗಿ ಗಮನಕ್ಕೆ ಬಂದಿದ್ದು, ತಕ್ಷಣ ಮಗುವನ್ನು ಪುತ್ತೂರು ಆಸ್ವತ್ರೆಗೆ ಕರೆದೊಯ್ಯಲಾಗಿತ್ತಾದರೂ ಅದಾಗಲೇ ಮಗು ಮೃತಪಟ್ಟಿತ್ತು ಎಂಬ ಮಾಹಿತಿ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here