ಬೆಳ್ತಂಗಡಿ: ಇಲ್ಲಿನ ಜ್ಯೂನಿಯರ್ ಕಾಲೇಜ್ ಬಳಿ ವಾಕಿಂಗ್ ಮಾಡುತಿದ್ದ ವಾಸು ಸಪಲ್ಯ ಅವರನ್ನು ಅವರ ಮಗನೇ ತಲವಾರಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಆ.24 ರಂದು ನಡೆದಿತ್ತು. ಅದಕ್ಕೆ ಸಂಬಂದಿಸಿದ ಆರೋಪಿ ಇದೀಗ ಅರೆಸ್ಟ್ ಆಗಿದ್ದಾನೆ.

ತಂದೆ (ವಾಸು ಸಪಲ್ಯ) ಹಾಗೂ (ದಯಾನಂದ) ಮಗನ ಮಧ್ಯೆ ಮನಸ್ತಾಪವಿತ್ತು ಎನ್ನಲಾಗಿದೆ. ಆ.24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆ ಮಾಡಲಾಗಿತ್ತು.

ಈ ಘಟನೆಯ ಬಳಿಕ ಮಗ ದಯಾನಂದ ನಾಪತ್ತೆಯಾಗಿದ್ದ ಹಾಗೂ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈ ಎಲ್ಲಾ ಕಾರಣದಿಂದ ಆತನೇ ಕೊಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತಪಡಿಸಿದ್ದರು.

ಬೆಳಿಗ್ಗೆ ವಾಕಿಂಗ್ ಹೊರಟ ತಂದೆಯನ್ನು ನಡು ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡದ ಪಿ.ಸಿ. ವೆಂಕಟೇಶ್, ಇಬ್ರಾಹಿಂ, ಲತೀಫ್ ಅವರುಗಳ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ (ನಿನ್ನೆ) ಆ.26 ರಂದು ರಾತ್ರಿ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ.

ತಂದೆ ತನ್ನನ್ನು ಬೈದಿರುವುದಕ್ಕೆ ತಾನೊಬ್ಬನೆ ಕೊಲೆ ನಡೆಸಿರುವುದಾಗಿ ಆರೋಪಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here