


ಬಂಟ್ವಾಳ : ಕೋವಿಡ್ ವೈರಸ್ ಹಾಗೂ ಲಾಕ್ಡೌನ್ ಕಾರಣದಿಂದ ಸ್ಥಗಿತಗೊಂಡಿರುವ ಶಿಕ್ಷಣ ವ್ಯವಸ್ಥೆಗೆ ಪುನರ್ ಜೀವ ನೀಡುವ ಹಾಗೂ ಮಕ್ಕಳ ಕಲಿಕಾ ಸಾಮಥ್ರ್ಯಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ವಿನೂತನ ‘ವಿದ್ಯಾಗಮ’ ಕಾರ್ಯಕ್ರಮದ ಅನುಷ್ಠಾನದ ನಿಟ್ಟಿನಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವ್ಯಾಪ್ತಿಯ ವಿವಿಧೆಡೆ ಕಲಿಕಾ ತರಗತಿಗಳನ್ನು ಪಾಣೆಮಂಗಳೂರು, ಮೆಲ್ಕಾರ್, ಗೂಡಿನಬಳಿ, ನಗ್ರಿ ಮೊದಲಾದೆಡೆ ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಜಂಕ್ಷನ್ಗಳಲ್ಲಿ ಸ್ಥಳ ಗುರುತಿಸಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮನಸ್ಥಿತಿಗೆ ಪೂರಕವಾಗಿ ತರಗತಿ ನಡೆಸುತ್ತಿದ್ದಾರೆ. ಇದೇ ಅಲ್ಲದೆ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾರ್ಯಕ್ರಮವೂ ನಡೆಯುತ್ತಿದೆ.
ಶಾಲಾ ಮುಖ್ಯ ಶಿಕ್ಷಕ ಭೋಜ, ಸಹ ಶಿಕ್ಷಕರಾದ ರಾಧಾಕೃಷ್ಣ ಬಾಳಿಗಾ, ಸುಧಾ ನಾಗೇಶ್, ಶಿವಪ್ಪ ನಾಯಕ್, ಉಮಾಕಿಶೋರಿ, ಧನರಾಜ್ ಡಿ ಆರ್, ವೀಣಾ ಸುಮಿತ್ರ, ಶ್ರೀಲತಾ, ಸುಜಾತಾ, ಅಜಿತ್ ಕುಮಾರ್, ಸುಧಾಕರ, ರವಿ ಸಹಿತ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳ ಹಿತಕ್ಕಾಗಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.





