ಬಂಟ್ವಾಳ: ಕೋವಿಡ್ ವೈರಸ್ ಹಾಗೂ ಲಾಕ್‍ಡೌನ್ ಕಾರಣದಿಂದ ಸ್ಥಗಿತಗೊಂಡಿರುವ ಶಿಕ್ಷಣ ವ್ಯವಸ್ಥೆಗೆ ಪುನರ್ ಜೀವ ನೀಡುವ ಹಾಗೂ ಮಕ್ಕಳ ಕಲಿಕಾ ಸಾಮಥ್ಯ೯ಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ವಿನೂತನ ಕಾಯ೯ಕ್ರಮ ‘ವಿದ್ಯಾಗಮ’ದ ಅನುಷ್ಠಾನದ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ವಿದ್ಯಾರ್ಥಿಗಳಿಗೆ ವೀರಕಂಬ ಗ್ರಾಮ ವ್ಯಾಪ್ತಿಯ ವಿವಿಧೆಡೆ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಧ ಸ್ಥಳ ಗುರುತಿಸಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮನಸ್ಥಿತಿಗೆ ಪೂರಕವಾಗಿ ತರಗತಿ ನಡೆಸುತ್ತಿದ್ದಾರೆ.

ಇದೇ ಅಲ್ಲದೆ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಶಿಕ್ಷಕರಿಂದ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾರ್ಯಕ್ರಮವೂ ನಡೆಯುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾತೃಶ್ರೀ ಗೆಳೆಯರ ಬಳಗ ವೀರಕಂಭದಲ್ಲಿ ಕಲ್ಲಡ್ಕ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಮೆಟಿಲ್ಡಾ ಲೋಬೊ ಉದ್ಘಾಟಿಸಿ, ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಪೋಷಕರು ಕೂಡ ಈ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮುಖ್ಯಶಿಕ್ಷಕ ನಾರಾಯಣ ಪೂಜಾರಿ ವಿದ್ಯಾಗಮದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ಗುಡ್ಡೆತೋಟ ,ಸಿಂಗೇರಿ, ಗಿಳ್ಕಿಂಜ, ನಂದಂತಿಮಾರು, ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಶಕುಂತಲಳಾ. ಎಂ.ಬಿ. ಕಂಪದ ಬೈಲು, ಕೋಡಪದವು, ತಾಳಿತ್ತನೂಜಿ, ಮಜಿ, ಮಜ್ಜೋನಿ ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಸಿಸಿಲಿಯ, ಎಮೆ೯ಮಜಲು, ನಕ್ಕರಾಜೆ, ಗಣೇಶ್ ಕೊಡಿ,  ಪ್ರದೇಶದ ಮಕ್ಕಳಿಗೆ, ಶಿಕ್ಷಕಿ ಸಂಗೀತ ಶರ್ಮ, ಬಾಯಿಲ ಅರೆಬೆಟ್ಟು, ಮಜಿ ಬೆತ್ತ ಸರವು, ಕೆಮ್ಮಟೆ, ಕುಮೇರು, ವೀರಕಂಬ, ಕೇಪುಳ ಕೊಡಿ ವ್ಯಾಪ್ತಿಯ ಮಕ್ಕಳಿಗೆ, ಶಿಕ್ಷಕಿ ಅನುಷಾ, ಕೆಲಿಂಜ, ಪೆಲತ್ತಡ್ಕ, ಬೆಂಜನತಿಮಾರು, ಪಾತ್ರ ತೋಟ, ಮಂಗಿಲಪದವು ಮಕ್ಕಳಿಗೆ, ಶಿಕ್ಷಕಿ ಮುರ್ಷೀದಾ ಬಾನು, ಮೈರ, ಕೊಂಬಿಲ, ಅನಂತಾಡಿ, ಚಾಕೊಟೆ ಮಾರು ವ್ಯಾಪ್ತಿಯ ಮಕ್ಕಳಿಗೆ, ಹಾಗೂ ಅತಿಥಿ ಶಿಕ್ಷಕಿಯರಾದ ಜಯಲಕ್ಷ್ಮಿ ಹಾಗೂ ಶ್ವೇತಾ ಎಲ್ಲಾ ಶಿಕ್ಷಕರ ಜೊತೆ ಸೇರಿಕೊಂಡು ಈ ಕಾರ್ಯಕ್ರಮದ ಯಶಸ್ವಿಗೆ ಶ್ರಮ ಪಡುತ್ತಿದ್ದಾರೆ.

ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ  ಶಿಕ್ಷಕರ ಜೊತೆ ಕೈಜೋಡಿಸಿದ್ದಾರೆ. ಊರಿನ ಮಕ್ಕಳ ಪೋಷಕರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾ ಇದ್ದು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here