ಬಂಟ್ವಾಳ: ಕೇಂದ್ರ ಸರಕಾರ ಅನುಷ್ಠಾನ ತಂದಿರುವ ಪೋಷಣ್ ಅಭಿಯಾನ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಕಾರ ಮೊಬೈಲ್ ಸೆಟ್ ನೀಡಿದೆ.
ಎಲ್.ಜಿ.ಕಂಪೆನಿಯ lmx 210 MW ಆಂಡ್ರೋಯ್ಡ್ ಮೊಬೈಲ್ ಜೊತೆಯಲ್ಲಿ 10,000 ಎಮ್.ಎಚ್ ಬ್ಯಾಟರಿ ಪವರ್ ಬ್ಯಾಂಕ್, 32 ಜಿ.ಬಿ.ಮೆಮೊರಿ ಕಾರ್ಡ್, ಸ್ಕ್ರೀನ್ ಗಾರ್ಡ್, ಮೊಬೈಲ್ ಹಿಂಬದಿ ಕವರ್ ಹಾಗೂ ಮೊಬೈಲ್ ಪೌಚ್ ಕೂಡಾ ನೀಡಿದೆ.
ಸಿಮ್ ಕೂಡ ಸರಕಾರವೇ ನೀಡಲಿದ್ದು, ಕೆಲವೇ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಿಮ್ ಬಂದ ಕೂಡಲೇ ಮೊಬೈಲ್ ಗಳನ್ನು ಶಿಕ್ಷಕಿಯರಿಗೆ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಜಿಲ್ಲೆಗೆ ಒಟ್ಟು 2186 ಮೊಬೈಲ್ ಪೋನ್ ಗಳು ಬಂದಿದ್ದು, ಬಂಟ್ವಾಳ ತಾಲೂಕಿಗೆ ಬಂಟ್ವಾಳ ಸಿ.ಡಿ.ಪಿ.ಒ ಮತ್ತು ವಿಟ್ಲ ಸಿ.ಡಿ.ಪಿ.ಒ. ಇಲಾಖೆಗೆ 570 ಮೊಬೈಲ್ ಫೋನ್ ಗಳು ಬಂದಿವೆ.
ಬಂಟ್ವಾಳ, ವಿಟ್ಲ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ, ಮಂಗಳೂರು ನಗರ ಭಾಗದ 2,100 ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು 86 ಅಂಗನವಾಡಿ ಮೇಲ್ವಿಚಾರಕಿಯರಿಗೆ ಮೊಬೈಲ್ ಸೆಟ್ ನೀಡಲಾಗಿದೆ.

ಸ್ನೇಹ ತಂತ್ರಾಂಶ

ಅಂಗನವಾಡಿ ಕೇಂದ್ರದಲ್ಲಿನ ಪ್ರತಿಯೊಂದು ಚಟುವಟಿಕೆಗಳನ್ನು ಅಯಾಯ ದಿನ ಇಲಾಖೆಗೆ ಸ್ನೇಹ ತಂತ್ರಾಂಶ ಕಳುಹಿಸಲು ಮೊಬೈಲ್ ಫೋನ್ ನೀಡಲಾಗಿದೆ. ಈಗಾಗಲೇ ಸ್ನೇಹ ತಂತ್ರಾಂಶದ ಬಳಕೆಯ ಬಗ್ಗೆ ತರಬೇತಿಯನ್ನು ಶಿಕ್ಷಕಿಯರಿಗೆ ನೀಡಲಾಗಿದೆ.

ಸಿ.ಡಿ.ಪಿ.ಒ.ಜಿಲ್ಲಾ ಉಪನಿರ್ದೇಶಕ ಉಸ್ಮಾನ್ ಎ

ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಮೊಬೈಲ್ ಫೋನ್ ಬಳಕೆಗೆ ನೀಡಿದ್ದು, ಅಂಗನವಾಡಿ ಕೇಂದ್ರದ ಪ್ರತಿಯೊಂದು ವಿಚಾರಗಳನ್ನು “ಸ್ನೇಹ ತಂತ್ರಾಂಶ”ದ ಮೂಲಕ ಅಪ್ ಲೋಡ್ ಮಾಡಿಕೊಳ್ಳಲು ಮತ್ತು ಮಕ್ಕಳ ತೂಕ, ಎತ್ತರ ಹಾಜರಿ, ಆಹಾರ ವಿತರಣೆಯ ಬಗ್ಗೆಯೂ ಆಪ್ ಮೂಲಕ ಅಪ್ ಡೇಟ್ ಮಾಡಬೇಕು ಎಂದು ಸಿ.ಡಿ.ಪಿ.ಒ.ಜಿಲ್ಲಾ ಉಪನಿರ್ದೇಶಕ ಉಸ್ಮಾನ್ ಎ. ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here