


ಬಂಟ್ವಾಳ: ಕರ್ನಾಟಕ ಸರಕಾರದ ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆ ಮಂತ್ರಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ| ಕೆ.ಸಿ ನಾರಾಯಣ ಗೌಡ ಇಂದಿಲ್ಲಿ ಬಂಟ್ವಾಳ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಇಲ್ಲಿನ ಚಾರ್ಲ್ಸ್ಬಾಗ್ ನಿವಾಸಕ್ಕೆ ಭೇಟಿಯನ್ನಿತ್ತು ಕೃಷಿಕ ಸಾಧಕರಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಚಾರ್ಲ್ಸ್ ವಿ.ಫ್ರಾಂಕ್ಗೆ ಶ್ರದ್ಧಾಂಜಲಿ ಅರ್ಪಿಸಿದರು.
ಹಾಲು ಉತ್ಪಾದಕರ ಸಂಘ ಮಂಡಾಡಿ ಬಂಟ್ವಾಳ ಇದರ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ವಿದ್ಯುತ್ ಮತ್ತು ನದಿನೀರು ಬಳಕೆದಾರರ ಹಿತರಕ್ಷಣಾ ಸಮಿತಿ ಬಂಟ್ವಾಳ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಜಾನಪದ ಕ್ರೀಡೆ ಕಂಬಳದ ನಿಪುಣ, ಕಂಬಳ ಕೋಣಗಳ ಓಟಗಾರ, ಪ್ರಗತಿಪರ ಸಾಧಕ ಕೃಷಿಕರಾಗಿದ್ದು, ಸಮಾಜಮುಖಿ ಸೇವೆಗಳಲ್ಲಿ ಸದಾ ಮುಚೂಣಿಯಲ್ಲಿದ್ದು ಓರ್ವ ನಿಷ್ಠಾವಂತ ಸಮಾಜ ಸೇವಕರಾಗಿ ನಾಡಿನಾದಾದ್ಯಂತ ಜನಾನುರೆಣಿಸಿ ಓರ್ವ ಪ್ರಗತಿಪರ ಕೃಷಿಕರಾಗಿ, ಪಶುಸಂಗೋಪಕ, ಪಾಲಕರಾಗಿ, ಪಶು ವೈದ್ಯರಂತೆಯೇ ಪಶುಗಳ ಪ್ರಸವದಲ್ಲೂ ಪರಿಣತರೆಣಿಸಿ ಅಗಲಿದ ಚಾರ್ಲ್ಸ್ ಫ್ರಾಂಕ್ಗೆ ನುಡಿ ನಮನಗೈದು, ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಬಾಷ್ಪಾಂಜಲಿ ಅರ್ಪಿಸಿದರು ಅಂತೆಯೇ ಮೃತರ ಪತ್ನಿ ಲತೀಷಿಯಾ ಚಾರ್ಲ್ಸ್ ಫ್ರಾಂಕ್ ಮತ್ತು ಪರಿವಾರಕ್ಕೆ ಇವರಿಗೆ ಸಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಯುವೋದ್ಯಮಿ ರಾಜೇಶ್ ರೋಡ್ರಿಗಸ್, ರೋಬರ್ಟ್ ಡಿಸೋಜಾ (ರೂಪಾ ಟ್ರಾವೆಲ್ಸ್), ಕಲಾವಿದ ವಾಲ್ಟರ್ ಪಿಂಟೋ ವಾಮಂಜೂರು, ರಾಷ್ಟ್ರಪತಿ ಪುರಸ್ಕೃತ ಡಿವೈಎಸ್ಪಿ ವಲೈಂಟಾಯ್ನ್ ಡಿಸೋಜಾ, ಬಂಟ್ವಾಳ ಪುರಸಭೆಯ ಮುಖ್ಯ ನಿರ್ವಹಣಾಧಿಕಾರಿ ಲೀನಾ ಫ್ರಾನ್ಸಿಸ್ ಬ್ರಿಟ್ಟೊ, ಇಂಜಿನೀಯರ್ ಗಳಾದ ಡೊಮಿನಿಕ್ ಡಿಮೆಲ್ಲೋ, ಇಕ್ಬಾಲ್, ಚಾರ್ಲ್ಸ್ ಪರಿವಾರದ ಫಿಲಿಪ್ ಮಾರ್ಕ್, ಜೆಸಿಂತಾ ತಾರಾ ಆರ್. ಬಂಟ್ವಾಳ್, ಅರುಣ್ ಫ್ರಾಂಕ್, ವಿಲ್ಮಾ ರೋಶನ್, ಡೈಝಿ ಅರುಣ್ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಆರೀಫ್ ಕಲ್ಕಟ್ಟ ಇವರಿಗೆ ಸಚಿವರು ವಿಶೇಷವಾಗಿ ಗೌರವಿಸಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸ್ವಾಗತಿಸಿ ವಂದಿಸಿದರು.






