



ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ. ಟ್ರಸ್ಟ್ ವಿಟ್ಲ ಇದರ ಸಾಲೆತ್ತೂರು ವಲಯದ ವಿಟ್ಲಪಡ್ನೂರು ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಾಯ ಸಂಘಗಳ ಸಹಕಾರದಲ್ಲಿ ಸಮಗ್ರ ತೋಟಗಾರಿಕಾ ಮಾಹಿತಿ ಕಾರ್ಯಗಾರ “ರೈತ ಕ್ಷೇತ್ರ ಪಾಠಶಾಲೆ “ಕಾರ್ಯಕ್ರಮವು ಕಿನಿಲ ಜಯರಾಮ್ ಕೆ. ಇವರ ಮನೆ ವಠಾರದಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಪ್ರಗತಿಪರ ಕೃಷಿಕ ಪಿ. ವಿಷ್ಣು ಭಟ್ ಸಾಂದೀಪನಿ ಹಾಗೂ ತಾಲೂಕು ಕೃಷಿ ಅಧಿಕಾರಿ ನಂದಿತಾ, ತೋಟಗಾರಿಕಾ ಬೆಲೆಗಳ ಗಿಡಗಳ ನಾಟಿ ಹಾಗೂ ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನಾ ಅಧಿಕಾರಿ ಮೋಹನ್, ವಲಯ ಮೇಲ್ವಿಚಾರಕಿ ಸುಜಾತ, ಬಿ ಒಕ್ಕೂಟದ ಅಧ್ಯಕ್ಷ ಸದಾಶಿವ ಕಿನಿಲ ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಪ್ಲೋರಿನಾ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.






