ಕಾರ್ಕಳ : ತಾಲೂಕಿನ ಹಿರ್ಗಾನ ಗ್ರಾಮದ ಗೇರು ಬೀಜ ಫ್ಯಾಕ್ಟರಿಯೊಂದಕ್ಕೆ ನಿನ್ನೆ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಅಗ್ನಿ ಅವಘಡದಿಂದಾಗಿ ಕೋಟ್ಯಾಂತರ ಮೌಲ್ಯದ ಸೊತ್ತುಗಳಿಗೆ ಹಾನಿ ಉಂಟಾಗಿದ್ದು ಭಾರೀ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.
ಬೆಂಕಿ ತಗುಲಿದ ವಿಚಾರವು ನಸುಕಿನ ಜಾವ 12.30 ರ ವೇಳೆಗೆ ಪಕ್ಕದಲ್ಲಿ ಮಲಗಿದ್ದ ಕೆಲಸಗಾರರ ಗಮನಕ್ಕೆ ಬಂದಿದ್ದು, ಕೂಡಲೇ ಮಾಲಕರಿಗೆ ಮಾಹಿತಿ ನೀಡಿ ಅಗ್ನಿ ಶಾಮಕ ದಳದವರನ್ನು ಕರೆಸಲಾಗಿದೆ. ಗೇರು ಬೀಜದ ಸಿಪ್ಪೆ ಮತ್ತು ಎಣ್ಣೆ ಇರುವುದರಿಂದ ಬೆಂಕಿಯು ಪಸರಿಸುತ್ತಲೇ ಇತ್ತು ಎಂದು ವರದಿಯಾಗಿದೆ.
ಮಾಲಕ ಪ್ರಕಾಶ್ ಅವರು ಹೇಳುವ ಪ್ರಕಾರ, ಅಗ್ನಿ ಅವಘಡದಿಂದ ಸುಮಾರು 1.5 ಕೋಟಿ ರೂ. ನಷ್ಟವಾಗಿದೆ ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here