ಚೆನ್ನೈ: ಭಾರತದ ಹೆಸರಾಂತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೋನಾ ನೆಗೆಟಿವ್ ಎಂದು ವರದಿಯಾಗಿದೆ. ಅವರ ಪುತ್ರ ಎಸ್‌.ಪಿ. ಚರಣ್ ಅವರು ಇದನ್ನು ದೃಢಪಡಿಸಿದ್ದಾರೆ. ಚೆನ್ನೈನ ಎಂಜಿಎಂ ಹೆಲ್ತ್‌ಕೇರ್ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಕೊವೀಡ್-19 ಪರೀಕ್ಷೆ ನಡೆಸಿದ ದೃಢಪಟ್ಟ ಬಳಿಕ ಎಸ್‌.ಪಿ.ಬಿ. ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13 ರ ರಾತ್ರಿ ಅವರ ಆರೋಗ್ಯ ಸ್ಥಿತಿ ತೀರ ಹದಗೆಟ್ಟಿತು ಮತ್ತು ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅವರ ಮಗ ಎಸ್.ಪಿ.ಚರಣ್ ಅವರು ಇಂದು ಹೇಳಿಕೆ ನೀಡಿದ್ದು, “ನನ್ನ ತಂದೆಗೆ ನಿಮ್ಮ ನಿರಂತರ ಬೆಂಬಲ ಮತ್ತು ಪ್ರಾರ್ಥನೆಗಳಿಗೆ ಧನ್ಯವಾದಗಳು. ನನ್ನ ತಂದೆ ಉತ್ತಮ ಮತ್ತು ಆರೊಗ್ಯ ಸ್ಥಿರವಾಗಿದೆ ಮತ್ತು ಅವರ ಕರೋನಾ ಪರೀಕ್ಷೆಯು ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here