ಬಂಟ್ವಾಳ: ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆದು ರಾಜ್ಯದ ಜನತೆಯ ಗಮನ ಸೆಳೆದಿದ್ದ ಬಂಟ್ವಾಳ ಕಂಚಿಕಾರ ಪೇಟೆಯ ಕೌಶಿಕ್ ನ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಜ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆ ಯಂತೆ ನೆರವಾಗಿದ್ದು, ಇದೀಗ ವಿದ್ಯಾ ರ್ಥಿ ಮೂಡಬಿದಿರೆಯ ಆಳ್ವಾಸ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆ ಗೊಂಡಿದ್ದಾನೆ.
ಮೂಡಬಿದಿರೆಯ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ.ಮೋಹನ್ ಆಳ್ವ ಅವರ ಜೊತೆ ಮಾತುಕತೆ ನಡೆಸಿದ ಶಾಸಕರು ಶಿಕ್ಷಣ ಕ್ಕೆ ದಾಖಲಾತಿ ವ್ಯವಸ್ಥೆ ಗೆ ಕ್ರಮಕೈಗೊಂಡಿದ್ದಾರೆ.
ಶಾಸಕರ ಮಾತಿನಂತೆ ಮೋಹನ್ ಆಳ್ವ ಅವರು ಕೌಶಿಕ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಲ್ಪಿಸಿದ್ದಾರೆ.
ಕೌಶಿಕ್ ನ ಆಸೆಯಂತೆ ಶಾಸಕರು ಮುತುವರ್ಜಿ ವಹಿಸಿ
ಮೋಹನ್ ಆಳ್ವ ಅವರು ವಾಣಿಜ್ಯ ವಿಭಾಗದಲ್ಲಿ ಪಿ.ಯು‌.ಸಿ. ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.


ಕೊಟ್ಟ ಮಾತು ಉಳಿಸಿದ ಶಾಸಕರು
ಕಾಲಿನ ಬೆರಳಿನ ಮೂಲಕ ಎಸ್.ಎಸ್ .ಎಲ್.ಸಿ.ಪರೀಕ್ಷೆ ಬರೆದು ರಾಜ್ಯದಲ್ಲಿ ಸುದ್ದಿಯಾದ ಸಂದರ್ಭದಲ್ಲಿ ಕೌಶಿಕ್ ನ ಫಲಿತಾಂಶ ವನ್ನು ನೋಡಿಕೊಂಡು ಆತನ ಇಚ್ಚೆ ಯ ವಿಷಯದಲ್ಲಿ ಮುಂದಿನ ವಿದ್ಯಾಭ್ಯಾಸ ದ ಸಂಪೂರ್ಣ ಜವಬ್ದಾರಿ ಯನ್ನು ವಹಸುವುದಾಗಿ ಭರವಸೆ ನೀಡಿದ್ದರು .
ಅವರು ನೀಡಿದ ಮಾತಿನಂತೆ ಕೌಶಿಕ್ ನ ಪಿ.ಯು.ಸಿ.ವಿದ್ಯಾಭ್ಯಾಸ ಕ್ಕೆ ದಾಖಲಾತಿ ಯನ್ನು ಮಾಡಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here