


ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 201 ಹೊಸ ಕೋವಿಡ್ ಸೋಂಕು ಪತ್ತೆಯಾಗಿದೆ. ಇಂದು 241 ಮಂದಿ ಸೋಂಕಿತರು ಗುಣಮುಖರಾಗಿದ್ದು, 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದಿನ 201 ಪ್ರಕರಣಗಳ ಪೈಕಿ 49 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ದೃಢಪಟ್ಟಿದೆ. 72 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುವುದು.
ಜಿಲ್ಲೆಯಲ್ಲಿನ ಈವರೆಗಿನ ಸೋಂಕಿತರ ಸಂಖ್ಯೆ 10,531 ಕ್ಕೆ ಏರಿಕೆಯಾಗಿದೆ. 316 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. 7918 ಮಂದಿ ಗುಣಮುಖರಾಗಿದ್ದು, 2287 ಸಕ್ರೀಯ ಪ್ರಕರಣಗಳಿವೆ.
ಇಂದು ದೃಢಪಟ್ಟ ಸೋಂಕಿತರ ವಿವರ:
ಮಂಗಳೂರಿನ 144, ಬಂಟ್ವಾಳ 22, ಪುತ್ತೂರು, ಸುಳ್ಯ ತಲಾ 5, ಬೆಳ್ತಂಗಡಿ 7 ಹಾಗೂ ಹೊರ ಜಿಲ್ಲೆಯ 18.






