ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 228 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,137 ಕ್ಕೆ ಏರಿಕೆಯಾಗಿದೆ.
ಇಂದು ದೃಢಪಟ್ಟ 228 ಪ್ರಕರಣಗಳ ಪೈಕಿ ಮಂಗಳೂರಿನಲ್ಲಿ 150, ಬಂಟ್ವಾಳದಲ್ಲಿ 23, ಪುತ್ತೂರಿನಲ್ಲಿ 15, ಸುಳ್ಯದಲ್ಲಿ 8, ಬೆಳ್ತಂಗಡಿಯಲ್ಲಿ 7 ಹಾಗೂ ಹೊರ ಜಿಲ್ಲೆಯ 25 ಮಂದಿಗೆ ಕೋವಿಡ್ ಪಾಸಿಟಿವ್‌ ದೃಢಪಟ್ಟಿದೆ.
ಇಂದಿನ ಪ್ರಕರಣಗಳ ಪೈಕಿ 102 ಐಎಲ್‌ಎ, 13 ಎಸ್‌ಎಆರ್‌ಐ ಪ್ರಕರಣಗಳಾಗಿದ್ದು, 17 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನುಳಿದ 90 ಮಂದಿಗೆ ಸೋಂಕು ತಗುಲಿರುವ ಸಂಪರ್ಕದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಇಬ್ಬರಿಗೆ ಸ್ಥಳೀಯ ಪ್ರಯಾಣದ ಇತಿಹಾಸವಿದ್ದು, ನಾಲ್ವರು ವಿದೇಶದಿಂದ ಬಂದವರಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು 320 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 7513 ಕ್ಕೆ ಏರಿಕೆಯಾಗಿದೆ. . ಪ್ರಸ್ತುತ 2319 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇಂದು ನಾಲ್ವರು ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ ಇಬ್ಬರು ಮಂಗಳೂರಿನವರಾಗಿದ್ದು ಒಬ್ಬರು ಇತರೆ ಜಿಲ್ಲೆಯವರು ಹಾಗೂ ಇನ್ನೊಬ್ಬರು ಬಂಟ್ವಾಳ ತಾಲೂಕಿನವರು. ಜಿಲ್ಲೆಯಲ್ಲಿ ಒಟ್ಟು ಈವರೆಗೆ 305 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here