ಬೆಳ್ತಂಗಡಿ: ಗಣೇಶ ಚತುರ್ಥಿಯ ಪ್ರಯಕ್ತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಕಲ್ಮಂಜ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 14ನೇ ವರುಷದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಯಿತು.

ಸಿದ್ದಬೈಲು ಪರಾರಿ ಶಾಲಾ ವಠಾರದಲ್ಲಿ ಸರಕಾರದ ಆದೇಶದಂತೆ ಸರಳ ರೀತಿಯಲ್ಲಿ ಗಣಹೋಮ ಕಾರ್ಯಕ್ರಮ ಹಾಗು ಅಯೋಧ್ಯೆ ಕರಸೇವಕರಿಗೆ ಮತ್ತು ಕೊರೊನಾ ವಾರಿಯರ್ಸ್‌’ಗೆ ಸನ್ಮಾನ ಸಮಾರಂಭ ಹಾಗು ಸಂಜೆ ಭಜನಾ ಕಾರ್ಯಕ್ರಮದೊಂದಿಗೆ ಗಣೇಶನ ಆರಾಧನೆ ನಡೆಯಿತು.

ಗಣಹೋಮವನ್ನು ಅರ್ಚಕ ಗಣಪತಿ ಚಿಪ್ನೋಣ್’ಕರ್ ಹಾಗು ಪ್ರಶಾಂತ್ ಕಾಕತ್ನರ್ ರವರು ನೆರವೇರಿಸಿದರು. ಕರಸೇವೆಯಲ್ಲಿ ಪಾಲ್ಗೊಂಡ ಮೋಹನ್ ರಾವ್ ಕಲ್ಮಂಜ ಹಾಗು ಶ್ರೀನಿವಾಸ್ ರಾವ್ ಕಲ್ಮಂಜ ಮತ್ತು ಕೊರೊನಾ ವಾರಿಯರ್ಸ್‌ ಆದ ಸರೋಜಿನಿ ಗೌಡ ಇವರನ್ನು ಸನ್ಮಾನಿಸಲಾಯಿತು. ಕರಸೇವಕ ಶೀನಿವಾಸ್ ರಾವ್ ಅನಿಸಿಕೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಎಂ., ಭಜರಂಗದಳದ ಸಂಚಾಲಕ ಸಂದೀಪ್ ಎಸ್., ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷ ಸಾಂತಪ್ಪ, ಸಮಿತಿ ಹಾಗು ಭಜರಂಗದಳದ ಕಾರ್ಯಕರ್ತರು ಹಾಗು ಊರವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here