ಬಂಟ್ವಾಳ: ಬ್ಯಾಂಕಿಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ, ಕೊಡುಗೆ ನೀಡಿದ ಹೆಗ್ಗಳಿಕೆ ದ.ಕ.ಜಿಲ್ಲೆಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಮೆಲ್ಕಾರ್ ನಲ್ಲಿ ನೂತನ ಶ್ರೀ ಶಂಕರ್ ಪತ್ತಿನ ಸಹಕಾರ ಸಂಘ (ನಿ.) ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದ.ಕ‌.ಜಿಲ್ಲೆಯ ಜನರಿಗೆ ಆರ್ಥಿಕ ವ್ಯವಸ್ಥೆ ಜ್ಞಾನ ಇದೆ, ವಿವಿಧ ರೀತಿಯಲ್ಲಿ ಆರ್ಥಿಕತೆ ಯನ್ನು ಕ್ರೋಡೀಕರಿಸಿ ಕೃಷಿಯ ಜೊತೆಗೆ ವಿವಿಧ ಸ್ತರದ ಉದ್ಯಮ ಗಳಿಗೆ ನೆರವು ನೀಡುವ ಕೆಲಸ ಸಹಕಾರ ಸಂಘಗಳಿಂದ ನಡೆಯುತ್ತಿರುವುದು ಅಭಿನಂದನೀಯ ಎಂದರು. ದ.ಕ.ಜಿಲ್ಲೆಯ ಆರ್ಥಿಕ ವ್ಯವಸ್ಥೆ ಯ ಸಬಲೀಕರಣಕ್ಕೆ ಸಹಕಾರಿ ಸಂಘಗಳ ಸಹಕಾರ ಹೆಚ್ಚು ಇದೆ ಇದೆ ಎಂದು ಅವರು ಹೇಳಿದರು.

ಭದ್ರತಾ ಕೊಠಡಿ ಉದ್ಘಾಟನೆ ಮಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾತನಾಡಿ ಒಳ್ಳೆಯ ಉದ್ದೇಶದಿಂದ ಈ ಸಹಕಾರಿ ಸಂಘ ಉದ್ಘಾಟನೆ ಆಗಿದೆ. ಎಲ್ಲಾ ವರ್ಗದ ಜನರಿಗೆ ಆಸರೆಯಾಗಲಿ ಎಂದು ಅವರು ಹೇಳಿದರು.

ಗಣಕ ಯಂತ್ರವನ್ನು ಉದ್ಘಾಟನೆ ನಡೆಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ , ಸಹಕಾರಿ ಸಂಘಗಳ ಮೂಲಕ ಪ್ರಾಮಾಣಿಕ ವ್ಯವಹಾರಕ್ಕೆ ದ.ಕ.ಜಿಲ್ಲೆ ಹೆಸರುವಾಸಿಯಾಗಿದೆ ಎಂದು ಅವರು ಹೇಳಿದರು.
ದ.ಕ.ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕಿನ ಅನೇಕ ಸಹಕಾರಿಗಳು ಕೊಡುಗೆ ನೀಡಿದ್ದಾರೆ ಎಂದು ನೆನಪಿಸಿದರು.
ಸರಕಾರದ ಸವಲತ್ತುಗಳನ್ನು ಪಡೆಯಲು ಸಹಕಾರಿ ಸಂಘಗಳ ಬಹಳ ಸುಲಭ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ , ಸಹಕಾರಿ ಸಂಘ ದ ಬಂಟ್ವಾಳ ವ್ಯಾಪ್ತಿಯ ಅಧಿಕಾರಿ ಸುಕನ್ಯ, ಮಾಲಕ ಮಹಮ್ಮದ್ ಇಕ್ಬಾಲ್ , ಮತ್ತು ಸಹಕಾರಿ ಸಂಘದ ಪ್ರವರ್ತಕರು ಮುರಳೀಧರ್ ರಾವ್, ವೇದವ್ಯಾಸ ರಾಮಕುಂಜ, ಅನಂತಪ್ರಭು, ಜಯಾನಂದ ಪೂಜಾರಿ, ಪ್ರವೀಣ್ ಚಂದ್ರ ಶೆಟ್ಟಿ, ಶಾಂತ, ರಮಾ ಎಸ್.ಭಂಡಾರಿ, ಸುದರ್ಶನ ಮಯ್ಯ, ಜಯಾನಂದ ಪೆರಾಜೆ, ಅನಿಲ್ ಕುಮಾರ್ ಬರಿಮಾರು ಉಪಸ್ಥಿತರಿದ್ದರು.

ಮುಖ್ಯ ಪ್ರವರ್ತಕ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಯಾನಂದ ಪೆರಾಜೆ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here