ಬಂಟ್ವಾಳ: ತಾಲೂಕಿನ ಅಲ್ಲಿಪಾದೆ ಸೈಂಟ್ ಜೋನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.

ಮೊಹಮ್ಮದ್ ಆಶಿಕ್ ಶೇ.92.16 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾನೆ. ಮೊಹಮ್ಮದ್ ಆಪ್ರೀದ್ 92% ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾನೆ.

ಉಳಿದಂತೆ ಶ್ರೇಯಾ(88.64%), ಅಕ್ಷಯ್(88.16%), ಮೋಕ್ಷಿತ್ (86.72%), ವೈಷ್ಣವಿ ರಾವ್ ಕೆ.(86.04%), ಅನುಷಾ(85.6%), ಕಾರ್ತಿಕ್(85.12%) ಹಾಗೂ 8 ಮಂದಿ ವಿಶಿಷ್ಟ ಶ್ರೇಣಿ, 20 ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ.

ಸೈಂಟ್ ಜೋನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 79.03% ಫಲಿತಾಂಶ ಲಭಿಸಿದೆ. ಪಿ.ಎಮ್.ರಾವೂಫ್ ಶೇ.85.6% ಗಳಿಸಿ ಪ್ರಥಮ ಸ್ಥಾನ ಹಾಗೂ ಲಿಖಿತ ಶೇ.84.16% ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.

1 ವಿಶಿಷ್ಟ ಶ್ರೇಣಿ, 14 ಮಂದಿ ಪ್ರಥಮ ಶ್ರೇಣಿ, 6 ಮಂದಿ ದ್ವಿತೀಯ ಶ್ರೇಣಿ, 2 ತೃತೀಯ ಶ್ರೇಣಿ ಪಡೆದಿದ್ದಾರೆ.
ಶಾಲಾ ಸಂಚಾಲಕಿ ಸಿ.ಅರ್ಚನ, ಶಾಲಾ ಮುಖ್ಯ ಶಿಕ್ಷಕಿ ಸಿ. ಸೆಲ್ವಿ ಹಾಗೂ ಶಿಕ್ಷಕ ವೃಂದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here