ಬಂಟ್ವಾಳ: ಕಾಂಗ್ರೆಸ್ ಪಕ್ಷವು ಭೂ ಮಸೂದೆ ಕಾನೂನಿನ ಮೂಲಕ ನೀಡಿದ ರೈತರ ಭೂಮಿಯನ್ನು ಬಿಜೆಪಿ ಸರಕಾರವು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಸಿಯಲು ಹೊರಟಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು ದುರ್ಬಲ ಗೊಳಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.


ಅವರು ಬಿ.ಸಿ.ರೋಡು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸರಕಾರದ ಜನವಿರೋಽ ನೀತಿಗಳ ವಿರುದ್ಧ ಕಾಂಗ್ರೆಸ್ ವತಿಯಿಂದ ನಡೆದ ಜನಧ್ವನಿ ಪ್ರತಿಭಟನೆಯಲ್ಲಿ ಮಾತನಾಡಿದರು. ಕೊರೊನಾ ನಿಯಂತ್ರಣದ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿರುವುದು ಈಗಾಗಲೇ ಸಾಬೀತಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಮನೆಯೇ ಇಲ್ಲದಾಗಿದ್ದು, ರೈತರ ಕಷ್ಟಗಳನ್ನು ಕೇಳುವವರೇ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಎರಡು ಬ್ಲಾಕ್‌ಗಳ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್‌ಕುಮಾರ್ ಶೆಟ್ಟಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ್ ಜೈನ್, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸದಸ್ಯರಾದ ಕೆ.ಸಂಜೀವ ಪೂಜಾರಿ, ಮಂಜುಳಾ ಕುಶಲ, ಧನಲಕ್ಷ್ಮಿ ಬಂಗೇರ, ಪುರಸಭಾ ಸದಸ್ಯರಾದ ಲುಕ್ಮಾನ್, ವಾಸು ಪೂಜಾರಿ, ಮಹಮ್ಮದ್ ಶರೀಫ್, ಗಂಗಾಧರ, ಪ್ರಮುಖರಾದ ಮೋಹನ್ ಗೌಡ ಕಲ್ಮಂಜ, ಪ್ರಶಾಂತ್ ಕುಲಾಲ್, ಫ್ಲೋಸಿ ಡಿಸೋಜ, ಜಯಂತಿ ವಿ.ಪೂಜಾರಿ, ಐಡಾ ಸುರೇಶ್, ಸುರೇಶ್ ಪೂಜಾರಿ, ವಿನ್ಸೆಂಟ್ ಪಿಂಟೊ, ಆದಂ ಕುಂಞ, ಲೋಲಾಕ್ಷ ಶೆಟ್ಟಿ, ಮಲ್ಲಿಕಾ ಪಕ್ಕಳ, ಸುಭಾಶ್ಚಂದ್ರ ಶೆಟ್ಟಿ, ಪದ್ಮನಾಭ ರೈ, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಸದಾಶಿವ ಬಂಗೇರ, ಮೊಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಮಧುಸೂಧನ ಶೆಣೈ ಮೊದಲಾದವರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here