


ನಿರ್ಮಲ ಸೊಬಗೊಳಗೆ ಅವಿತಿಹ ಗುಟುಕು ಗುಟುಕರಿಸಲು ಊರಿದೆ ಕಾಲ್ಗಂಬ..
ನಿಶ್ಚಲ ನೀರ ಕನ್ನಡಿಯೊಳು ನಗುತಿದೆ ನನ್ನದೇ ಪ್ರತಿಬಿಂಬ…..
ಗಿರಿಶಿಖರದ ಮರೆಯೊಳು ಮರದ ಪೊಟರೆಯೊಳಗಿನ ಚಿಲಿಪಿಲಿ ನಾದ….
ಗುಯ್ ಗುಡುವ ಹಸಿವ ತಣಿಸಲು ಜೊತೆಗಾರನ ಜೋಡಿ ಪಾದ…..
ಕನಸಿನ ಕುಸುರಿಯ ಮನಸಲಿ ಉಸುರಿದೆ
ಬದುಕ ಬಂಡಿಯಲಿ….
ಒಂಟಿತನಕೆ ಜಂಟಿಯಾಗಿ ಹೆಜ್ಜೆಯಿರಿಸಿದೆ
ಬಾಳ ಹಾದಿಯಲಿ….
ಸ್ತಬ್ಧ ಉದಕದೊಳು ಕಣ್ಣಂಚಿನಲಿ ಮತ್ಸ್ಯಗಳ
ಚೆಲ್ಲಾಟ ಗೋಚರ….
ತುತ್ತು ಕೂಳ ಆರಿಸಿದರೆ ಅಲೆಗಳಲಿ
ನೀ ಅಗೋಚರ…..
ನನ್ನೊಲುಮೆಯ ಜೀವಯಾನದೊಳಗೆ ಮಾತು ಮೌನದ ಬಂಧನ….
ಬೆಳಕ ಹಾದಿಯಲಿ ಜಗವ ಸುತ್ತಿಹೆವು
ಸೊಗಸು ಈ ಪಯಣ….
✍️ ತುಳಸಿ ಕೈರಂಗಳ್ @ (ಭಾರತಿ.ಸಿ)





