ಬಂಟ್ವಾಳ: ಮೆಸ್ಕಾಂ ಮೀಟರ್ ರೀಡರ್‌ಗಳ ಕೆಲಸ ಹಾಗೂ ವೇತನ ಕಡಿತದ ಕುರಿತು ಜಿಲ್ಲೆಯ ಶಾಸಕರು, ಸಚಿವರು, ಸಂಸದರ ಗಮನಕ್ಕೆ ತಂದರೂ, ಯಾವುದೇ ಸ್ಪಂದನೆ ಇಲ್ಲ. ಜತೆಗೆ 2 ತಿಂಗಳ ವೇತನ ನೀಡದೆ ಮೆಸ್ಲಾಂ ರೀಡರ್‌ಗಳಿಂದ ಮೆಷಿನ್ ನೀಡುವಂತೆ ಒತ್ತಡ ಹಾಕುತ್ತಿದೆ ಎಂದು ದಲಿತ್ ಸೇವಾ ಸಮಿತಿಯ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಆರೋಪಿಸಿದರು.
ಅವರು ಬಿ.ಸಿ.ರೋಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರ ಹೆಸರಿನಲ್ಲಿ ಸರಕಾರ ಹಾಗೂ ಮೆಸ್ಕಾಂ ಇಲಾಖೆ ಪಿತೂರಿ ನಡೆಸಿ ರೀಡರ್‌ಗಳಿಗೆ ಅನ್ಯಾಯ ಮಾಡುತ್ತಿದೆ. ಹಿಂದಿನ ಗುರಿಯನ್ನು ಗ್ರಾಮೀಣ ಭಾಗದಲ್ಲಿ 2500, ನಗರದಲ್ಲಿ 3500ಕ್ಕೆ ವಿಸ್ತರಿಸಿ ಹೆಚ್ಚುವರಿ ರೀಡರ್‌ಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಜತೆಗೆ ಎಲ್ಲರಿಗೂ ಕೆಲಸ ಬೇಕಾದರೆ ವೇತನವನ್ನು ಅರ್ಧ ಬೇರೆಯವರಿಗೆ ನೀಡುವಂತೆ ಸಲಹೆ ನೀಡುತ್ತಿದ್ದಾರೆ ಎಂದರು.

 

ಈಗಾಗಲೇ ಮೆಷಿನ್ ನೀಡದೇ ಇರುವು ಕುರಿತು ರೀಡರ್‌ಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕನಿಷ್ಟ ವೇತನ ನೀಡದೇ ಇರುವ ಕುರಿತು ನಾವು ಕೂಡ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದು, ಜತೆಗೆ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಮೀಟರ್ ರೀಡರ್ ಕಾರ್ಯ ನಿರ್ವಹಿಸುವ ಚಂದ್ರಶೇಖರ್ ವಿಟ್ಲ, ಜಯರಾಮ, ಗೋಪಾಲ ನೇರಳಕಟ್ಟೆ, ಸದಾಶಿವ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here