ಬಂಟ್ವಾಳ: ವಿನಾಯಕ ಶಂಕರ ನಾರಾಯಣ ದುರ್ಗಾಂಭ ಕ್ಷೇತ್ರ ನಂದಾವರ ಇಲ್ಲಿ ಪ್ರತಿ ವರ್ಷ ಆಚರಿಸುವ ಗಣೇಶ ಚತುರ್ಥಿ ಹಬ್ಬ ಈ ಬಾರಿ ಆಗಸ್ಟ್ 22 ರಂದು ಶನಿವಾರ ಸರಕಾರದ ಮಾರ್ಗಸೂಚಿಯಂತೆ ಸಾಂಕೇತಿಕವಾಗಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
ಕೋವಿಡ್- 19 ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಸರಕಾರದ ಮಾರ್ಗಸೂಚಿ ಯಂತೆ ಸಾಂಕೇತಿಕವಾಗಿ ಆಚರಣೆ ನಡೆಸಲು ತೀರ್ಮಾನ ಮಾಡಿದ್ದು , ಗಣೇಶ ಚತುರ್ಥಿ ದಿವಸ ದೇವಳದಲ್ಲಿ ಯಾವುದೇ ಸೇವೆಗಳು , ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಇರುವುದಿಲ್ಲ.
ಭಕ್ತಾದಿಗಳಿಗೆ ಕೇವಲ ದೇವರ ದರ್ಶನ ಕ್ಕೆ ಮಾತ್ರ ಅವಕಾಶವಿದೆ ಎಂದು ತಿಳಿಸಿದೆ.
ವರ್ಷಂಪ್ರತಿ ಆಚರಿಸುವ ತೆನೆ ತುಂಬಿಸುವ ಕಾರ್ಯಕ್ರಮ ದಲ್ಲಿ ಸಾರ್ವಜನಿಕರಿಗೆ ತೆನೆ ವಿತರಣೆ ಇರುವುದಿಲ್ಲ ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಪ್ರಕಟನೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here