ಇಂದು ವಿಶ್ವ ಛಾಯಾಗ್ರಹಣ ದಿನ. ಛಾಯಾಗ್ರಾಹಕರ ನೆಮ್ಮದಿ ಮತ್ತು ತಮ್ಮ ಕರ್ತವ್ಯದ, ಕಾಯಕದ ಆ ಕಲೆ-ಸಂಸಾರದ ನೆಲೆ, ಬದುಕಿನ ಬೆಲೆಯನ್ನು, ಸಮಾಜದಲ್ಲಿ ಬದುಕಲು‌ ಕಲಿಸಿದ ಸೆಲೆಯನ್ನು “ವೈಟ್ ಕಾಲರ್ ಜಾಬ್” ಎಂದು ಕರೆಸಿ ಕೊಳ್ಳುವ ಪೊಟೊಗ್ರಾಪರ್ ವ್ರತ್ತಿಯ ವಿಶ್ವದಾದ್ಯಂತ ಆಚರಿಸುವ ದಿನವಿಂದು ಆಗಸ್ಟ್19.
ನೆನಪಾಗುತ್ತದೆ..! ಅಂದು ಛಾಯಾಗ್ರಹಕರಿಗೆ ಬೇಕಾದದ್ದು, ಅಂದಿನ ಮಾರುಕಟ್ಟೆಯ ಸಣ್ಣ ಕ್ಯಾಮೆರಾ..! ಅಂದು ಕ್ಯಾಮೆರಾ ಒಂದು ಸಾವಿರದಲ್ಲಿದ್ದದ್ದು ಇಂದು ಲಕ್ಷಕ್ಕೂ ಮೀರಿದೆ..ಬಿಡಿ ಆಧುನಿಕ ತಂತ್ರಜ್ಞಾನ ಬೆಳೆದಿದೆ.. ಅದರೊಂದಿಗೆ ಎಲ್ಲವೂ ಬದಲಾಗಿದೆ. ಅಂದು ಛಾಯಾಗ್ರಾಹಕನಿಗೆ ವಿಧ್ಯಾಭ್ಯಾಸವೂ ಅಗತ್ಯವಿರಲಿಲ್ಲ. ಸ್ಟುಡಿಯೋ ಎನ್ನುವ ಭಾವಚಿತ್ರಾಲಯಕ್ಕೆ ಹೊಕ್ಕ ಬಾಲಕ ಕಪ್ಪು ಬಿಳುಪಿನ ಆ ಕಾಲದಲ್ಲಿ ಪೊಟೊವನ್ನು ಕತ್ತಲ ಕೋಣೆಯಲ್ಲಿ “ಡೆವೆಲಪರ್” ನಲ್ಲಿ ತೊಳೆದು “ಹೈಪೊ” ದಲ್ಲಿ ಬೆಳೆದು, ಮುಸುಕು ಕ್ಯಾಮೆರಾದಲ್ಲಿ‌ ಅರಳಿ, ಚುರುಕು‌ ವ್ಯಕ್ತಿಗಳಾಗಿ‌ ಮಹಾನ್ ವ್ಯಕ್ತಿಗಳ ಒಡನಾಡಿಯಾದವರು ಕ್ಯಾಮೆರಾ ಮ್ಯಾನ್ ಗಳು.
ಸ್ವಂತ ಸ್ಟುಡಿಯೋದ ಮಾಲಕರಾದರು, ಬದುಕಿನಲ್ಲಿ ಶಿಸ್ತನ್ನು ಕಲಿತರು, ಹೋದಲ್ಲಿ ಬಂದಲ್ಲಿ ಗೌರವ ಪಡೆದರು, ವಿವೇಕ-ಮಾನವೀಯತೆಯ ಆದರ್ಶರಾದರು, ಸ್ಪೂರ್ತಿಯ ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ!! ಡಿ.ವೀರೇಂದ್ರ ಹೆಗಡೆ ಯವರ ಹವ್ಯಾಸಿ ಛಾಯಾಗ್ರಹಣ, ಸಚಿವರು ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರ ವ್ರತ್ತಿ ಛಾಯಾಗ್ರಹಣ ಛಾಯಾಗ್ರಾಹಕರಿಗೆ ನವೊಲ್ಲಾಸವನ್ನು ನೀಡಿತು. ಅದೆಷ್ಟೋ ಸಾಧಕರು ಛಾಯಾಗ್ರಹಣದ ವಾಸ್ತವ ಸತ್ಯವನ್ನು ತಿಳಿದರು.
ಇಂದು ವಿಶ್ವ ಛಾಯಾಗ್ರಹಣ ದಿನವಂತೆ..! ಏನಿದರ ಉದ್ದೇಶ..? ಇಂದು ಮೊಬೈಲ್ ಯುಗ. ಎಲ್ಲಾ ಛಾಯಾಚಿತ್ರ ಮೊಬೈಲ್ ನಲ್ಲಿ ಸೆರೆಹಿಡಿಯಲು ಸುಲಭ, ವೀಡಿಯೋ ಚಿತ್ರೀಕರಣವೂ ಅದರಲ್ಲಿ ಸಾಧ್ಯ.. ಅದೇ ನೆನಪು, ಅದೇ ಆಲ್ಬಂ! ಆದರೆ ಅದರಲ್ಲೇ ಸಾದಿಸಿ ಸಾಧಕರಾದವರೂ ಇದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಕ್ಯಾಮೆರವಾಗಿ, ಮನೆಮಂದಿ ಕ್ಯಾಮೆರಾ ಮ್ಯಾನ್ ಆಗಿ. ಮನೆ ಸಂಸಾರದ ಎಲ್ಲಾ ಶುಭ ಸಮಾರಂಭಗಳು ಮನೆಯಾತನ ಮೊಬೈಲ್ ಗ್ಯಾಲರಿ ತುಂಬುತ್ತದೆ. ಅಂದಿನ ಪ್ಯಾಮಿಲಿ‌ ಡಾಕ್ಟರ್ ಇದ್ದಂತೆ ಇದ್ದ ಪ್ಯಾಮಿಲಿ‌ ಪೊಟೊಗ್ರಾಪರ್ ಇಂದು ಮರೆಯಾಗಿದ್ದಾನೆ..! ಕೆಲವೊಂದು ಕಡೆ ಕಾಣ ಸಿಗುತ್ತಾನೆ, ಆದರೆ ಛಾಯಾಗ್ರಹಣ ದಿನವನ್ನು ಆಚರಿಸುವ ವ್ರತ್ತಿ ಛಾಯಾಗ್ರಾಹಕ ಇಂದೂ ತನ್ನ ಕರ್ತವ್ಯಕ್ಕೆ ಹೋರಾಡುತಿದ್ದಾನೆ..
*ವಿಶ್ವ ಛಾಯಾಗ್ರಹಣ ದಿನ* ವೆಂದರೆ ಛಾಯಾಗ್ರಹಣದ ಮುದ್ರಣದ ಸೂತ್ರವನ್ನು ಛಾಯಾಚಿತ್ರ ಜನಕ *ಡ್ಯಾಗರೆ* ಯಿಂದ ಪಡೆದಿದ್ದ ಕೊಡಕ್ ಎನ್ನುವ ಛಾಯಾಗ್ರಹಣ ವಸ್ತು ತಯಾರಿಕಾ ಸಂಸ್ಥೆ ಪಡೆದ ದಿನ ಅಗಸ್ಟ್ 19- 1839. ಇಂದು 181ನೇ ವರ್ಷ ಆಚರಣೆ.
ಛಾಯಾ ಪ್ರತಿಬಿಂಬವನ್ನು ಶಾಶ್ವತವಾಗಿ ಹಿಡಿದಿಡಬಲ್ಲ ಸೂತ್ರವನ್ನು ವಾಣಿಜ್ಯಕರಣ ಗೊಳಿಸಲು ಸಾರ್ವಜನಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಮಾನವನ ಅತ್ಯುತ್ತಮ ಸಂಶೋಧನೆಯಾಗಿದ್ದ ಈ ಕಲೆ ಛಾಯಾಗ್ರಹಣ ಕಲೆಯ ಅಭಿವ್ಯಕ್ತಿಯಲ್ಲಿ ಮಹತ್ವವನ್ನು ಪಡೆಯಿತು. ವಿಶ್ವ ಛಾಯಾಗ್ರಹಣ ದಿನದ ಮಹತ್ವ ಸಂಭ್ರಮಿಸುವ ಸಂಧರ್ಭ ಸ್ರಷ್ಟಿಯಾಗಿದ್ದು ನಮ್ಮ ದೇಶ ಭಾರತದಿಂದ ಎನ್ನುವುದು ನಮಗೆ ಹೆಮ್ಮೆಯ ವಿಚಾರ.
*ಹೌದು.. ಒಂದು ಛಾಯಾಚಿತ್ರ ಸಾವಿರ(ದ)ಪದಗಳಿಗೆ ಸಮ*
ಪೊಟೊಗ್ರಾಪರ್ ತಮ್ಮ ಯೋಚನೆ, ಯೋಜನೆ, ಹಂಚಿಕೊಳ್ಳಲು, ಪ್ರೋತ್ಸಹಿಸಲು, ತಾಂತ್ರಿಕ, ಕೌಶಲ್ಯ, ಪ್ರೇರಣೆ ನೀಡಲು ಹಿರಿಯರನ್ನು ನಮಿಸಲು ಈ ದಿನವನ್ನು ಆಚರಿಸುತ್ತಾರೆ.
ಇಂದು ಛಾಯಾ ಬಂಧುಗಳ ಸಂಘಟನೆ ಬೆಳೆದಿದೆ. ಒಮ್ಮತದಲ್ಲಿ ಐಖ್ಯತೆ ಮೂಡಿದೆ, ರಾಜ್ಯದ ಸಂಘಟನೆಯ ಅಡಿಯಲ್ಲಿ ಜಿಲ್ಲಾ ಸಂಘಟನೆ ಅದರ ಗರ್ಭದಲ್ಲಿ ವಲಯ ಸಂಘಟನೆಗಳು ಶಕ್ತಿ ಶಾಲಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಸಹಾಯ, ಆರೋಗ್ಯದ ದ್ರಷ್ಟಿಯಲ್ಲೂ ದುಡಿದದ್ದು ಸ್ವಲ್ಪ ಬದುಕಿಗೆ ಉಳಿದದ್ದು ಸಮಾಜಕ್ಕೆ ಎನ್ನುವ ತೆರದಿ ಸಮಾಜ ಸೇವೆಯಲ್ಲಿ ತೊಡಗಿದೆ..! ಜಿಲ್ಲೆ, ರಾಜ್ಯ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸಾಧಕರು ಇದರೊಳಗಿದ್ದಾರೆ.. ಪತ್ರಿಕೆ ದ್ರಶ್ಯ ಮಾಧ್ಯಮದಲ್ಲಿ ಛಾಯಾಗ್ರಹಕರ ಚಿತ್ರ ಕೈ ಚಳಕ ಮರೆಯಲಾದದ್ದು. ಅವರಿಗೂ ಛಾಯಾಕ್ಷೇತ್ರದಲ್ಲಿ ಉತ್ತಮ ಹೆಸರು ಮೆರೆದಿದೆ.
ಆದರೆ ಇಂದು ಕೊರೋನಾ ಮಹಾಮಾರಿಯಲ್ಲಿ ಎಲ್ಲಾ ಛಾಯಾಗ್ರಾಹಕರ ಸಂಪಾದನೆ, ಸಾಧನೆ, ಸಾದಿಸಬೇಕೆಂಬ ಭಾವನೆ ಮರೆಯಾಗಿದೆ. ಆದರೆ ಛಾಯಾಗ್ರಹಣ ಛಾಯಾಗ್ರಾಹಕರ ಬದುಕಿಗೆ ಆವರಿಸಿದ ಗ್ರಹಣವಲ್ಲ. ನೆರಳು ಬೆಳಕಿನ ಹೊಂಗಿರಣ, ಬದುಕಿನ ಪ್ರತಿ ದಿನ ಕ್ಷಣಗಳನ್ನು ದಾಖಲಿಸುವ ಸಿಂಚನ.
*ಛಾಯಾಗ್ರಾಹಕರು ನಮ್ಮೆದುರಿನ ನೆನಪಿನ ಚಿತ್ರ.*
*ಛಾಯಾಗ್ರಾಹಕನಿಗೆ ವಿಶ್ವ ಛಾಯಾದಿನದ ಶುಭಾಶಯ ಮಿತ್ರ*
*ಬರಹ : ಎಚ್ಕೆ, ನಯನಾಡು*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here