ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಕ್ಷೇತ್ರ ಸಜಿಪಮುನ್ನೂರು ಮಹಾಶಕ್ತಿಕೇಂದ್ರದಲ್ಲಿ ಪಕ್ಷದ ವಿವಿದ ಸ್ತರದ ಜವಾಬ್ದಾರಿ ಇರುವ ಪ್ರಮುಖರ ಸಭೆಯು ಬಿ.ಸಿರೋಡು ಪಕ್ಷದ ಕಾರ್ಯಾಲಯದಲ್ಲಿ ಜರುಗಿತು.
ಈ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ಅವರು ಪಕ್ಷದ ಸೂಚನೆಗಳನ್ನು ತಿಳಿಸಿ ಇದನ್ನು ಬೂತ್ ಮಟ್ಟಕ್ಕೆ ಮುಟ್ಟಿಸಿ ಸ್ಥಾನೀಯ ಸಮಿತಿಯನ್ನು ಸಕ್ರಿಯಗೊಳಿಸುವಂತೆ ತಿಳಿಸಿದರು. ಜಿಲ್ಲಾ ಉಪಾಧ್ಯಕ್ಷರು, ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಮಾತಾನಾಡಿ ಗ್ರಾಮ ರಾಜ್ಯದಿಂದ ಮಾತ್ರ ರಾಮರಾಜ್ಯ ಸಾದ್ಯ. ನಾವೆಲ್ಲ ಪ್ರಬುಧ್ಧ ಕಾರ್ಯಕರ್ತರು ನಾವೆಲ್ಲ ನಮ್ಮ ನಮ್ಮ ಪಂಚಾಯತ್ ನ ಗೆಲುವಿನ ಗುರಿಯನ್ನು ಇಟ್ಟು ಮುಂದಿನ ದಿನಗಳಲ್ಲಿ ಕೆಲಸ ಮಾಡೋಣ ಎಂದರು.

ಪಕ್ಷದ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬಡಗಬೆಳ್ಳೂರು ಮಾತಾನಾಡಿ ಪಕ್ಷ ನಮ್ಮ ನಿಮ್ಮೆಲ್ಲರ ಮೇಲೆ ವಿಶ್ವಾಸ ಇಟ್ಟು ಜವಾಬ್ದಾರಿಗಳನ್ನು ನೀಡಿದೆ. ಈ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡೋಣ. ಶಾಸಕರಾದ ರಾಜೇಶ್ ನಾಯಕ್ ರವರ ಅಭಿವೃಧ್ಧಿ ಕೆಲಸವನ್ನು ಬೂತಿನ ಪ್ರತಿ ಮನೆಗೆ ಮುಟ್ಟಿಸಿ ಅತೀ ಹೆಚ್ಚಿನ ಪಂಚಾಯತ್ ಗೆದ್ದು ಶಾಸಕರ ಕೈಯನ್ನು ಬಲಪಡಿಸೋಣ ಎಂದರು ಕಾರ್ಯಕರ್ತರ ಸಂಘಟನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.


ಸಜಿಪಮುನ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಬೆಳ್ಳೂರು ವಂದಿಸಿದರು.
ಸಭೆಯಲ್ಲಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ, ಸಹಕಾರಿ ಸಂಘಗಳ ಅಧ್ಯಕ್ಷರಾದ ಜಯಶಂಕರ ಬಾಸ್ರಿತ್ತಾಯ, ಸಂಪತ್ ಕುಮಾರ್ ಶೆಟ್ಟಿ, ನಂದರಾಮ್ ರೈ ಮತ್ತು ಪಕ್ಷದ ಪದಾದಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here