ಬಂಟ್ವಾಳ: ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಂಗ್ರೆಸ್ ಬೆಂಬಲಿತ ಮಾಜಿ ಗ್ರಾ.ಪಂ.ಅಧ್ಯಕ್ಷನ ಮನೆಗೆ ಭೇಟಿ ನೀಡಿದ ಬಳಿಕ ರಾಜಕೀಯ ವಲಯದಲ್ಲಿ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿದೆ.
ಸರಕಾರಿ ಕಾರ್ಯಕ್ರಮದ ನೆಪದಲ್ಲಿ ಸಜೀಪಮೂಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬೊಳ್ಳಾಯಿ ಗಣಪತಿ ಭಟ್ ಅವರ ಮನೆಗೆ ಭೇಟಿ ನೀಡಿದ ಉದ್ದೇಶ ಏನು‌ ಎಂಬ ಪ್ರಶ್ನೆಗಳು ಉದ್ಭವವಾಗಿದೆ.


ರಾಜ್ಯ ಸರಕಾರದ ರೈತರ ಬೆಳೆ ಸಮೀಕ್ಷೆ ಆಪ್ ಒಂದನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಕಾಂಗ್ರೆಸ್ ನ ಭಟ್ ಅವರ ಮನೆಯಲ್ಲಿ ಇಟ್ಟಿರುವುದು ಮುಂದಿನ ರಾಜಕೀಯ ಲಾಭವನ್ನು ಲೆಕ್ಕಾಚಾರದಲ್ಲಿ ಎಂಬ ಮಾತುಗಳು ಕೇಳಿಬರುತ್ತಿದೆ.
ಅನೇಕ ಕೃಷಿಕರು ಇದ್ದರೂ ಕೂಡಾ ಮಾಜಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಗಣಪತಿ ಭಟ್ ಅವರ ಮನೆಯಲ್ಲಿಯೇ ಆಪ್ ಬಿಡುಗಡೆ ಮಾಡಿದರ ಒಳಮರ್ಮವೇನು.?

            ಶ್ರೀಕಾಂತ್ ಶೆಟ್ಟಿ

ಗ್ರಾ.ಪಂ.ಚುನಾವಣೆಗೆ ವೇದಿಕೆ ಸಿದ್ದವಾಗುತ್ತಿದೆಯಾ?
ಗ್ರಾ.ಪಂ.ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚದುರಂಗದಾಟಕ್ಕೆ ಎರಡು ಬಲಿಷ್ಠ ರಾಜಕೀಯ ಪಕ್ಷಗಳು ಹಣಾಹಣಿಗೆ ಸಿದ್ದವಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರತಿಷ್ಟೆ ಮತ್ತು ರಾಜಕೀಯದಲ್ಲಿ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಪ್ರಯತ್ನ ರಾಜಕೀಯ ನಾಯಕರುಗಳದ್ದು ಮತ್ತು ಪಕ್ಷದ್ದು.
ಆ ಹಿನ್ನೆಲೆಯಲ್ಲಿ ಗೆಲುವಿನ ಕುದುರೆಯನ್ನು ಅರಸಿಕೊಂಡು ಪಕ್ಷ ಗಟ್ಟಿಗೊಳಿಸುವ ಕೆಲಸ ಪ್ರಾರಂಭಗೊಂಡಿದೆ. ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ರಾಜಕೀಯ ಪಕ್ಷಗಳು ಕರೆ ನೀಡಿದೆ. ಈ ಮಧ್ಯೆ ಪಕ್ಷದಲ್ಲಿ ಅಸಮಾಧಾನ ಹೊಂದಿರುವ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ನಾಯಕರು ಒದ್ದಾಟ ನಡೆಸುತ್ತಿದ್ದಾರೆ. ಆದರೆ ನಾಯಕರ ಮಾತಿಗೆ ಬೆಲೆ ಕೊಡದೆ ಕೆಲವರು ಪಕ್ಷ ತೊರೆಯುವ ಕೆಲಸ ಕೂಡ ಮಾಡುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಗಣಪತಿ ಭಟ್ ಮನೆಗೆ ಉಸ್ತುವಾರಿ ಸಚಿವ ಹಾಗೂ ಶಾಸಕರ ಭೇಟಿಯೇ.? ಎಂಬ ಮಾತುಗಳು ಕೇಳಿಬರುತ್ತಿದೆ.

            ಗಣಪತಿ ಭಟ್

ಸಜೀಪದ ಮಾಸ್ಟರ್ ಮೈಂಡ್ ನಾಯಕನ ಪ್ಲಾನ್? ಸಕ್ಸಸ್ ಆಗುತ್ತಾ?

ಕಳೆದ ಅವಧಿಯಲ್ಲಿ ಕಾಂಗ್ರೇಸ್ ಬೆಂಬಲಿತ ಸದಸ್ಯನಾಗಿ ಆಯ್ಕೆಯಾದ ಬಳಿಕ ಆಧ್ಯಕ್ಷನಾಗಿ ಸೇವೆ ಸಲ್ಲಿಸಿದ ಗಣಪತಿ ಭಟ್ ಕಾರಣಾಂತರಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಸೈಲೆಂಟ್ ಅಗಿ ಬಿಟ್ಟಿದ್ದರು. ಆದರೆ ರಾಜಕೀಯ ಚತುರ, ಆರ್ಥಿಕ ವ್ಯವಸ್ಥೆಯಲ್ಲಿ ಸದೃಢವಾಗಿರುವ ಕಾರ್ಯಕರ್ತನನ್ನು ಈ ಬಾರಿ ಬಿಜೆಪಿಗೆ ಸೆಳೆಯುವ ಪ್ರಯತ್ನ ಗುಟ್ಟಾಗಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸಜೀಪದ ಮಾಸ್ಟರ್ ಮೈಂಡ್‌ ಯುವ ನಾಯಕ ಸಂಕೇಶ ಶ್ರೀಕಾಂತ್ ಶೆಟ್ಟಿಯವರು ಗಣಪತಿ ಭಟ್ ಸಹಿತ ಅನೇಕ ಅಸಮಾಧಾನದ ಹೊಗೆಯಲ್ಲಿರುವ ಕಾಂಗ್ರೇಸ್ ಕಾರ್ಯಕರ್ತರನ್ನು ಈ ಬಾರಿ ಬಿಜೆಪಿಗೆ ಸೆಳೆಯುವ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.
ಇವರ ಪ್ಲಾನ್ ಸಕ್ಸಸ್ ಆಗುತ್ತಾ? ಕಾಂಗ್ರೇಸ್ ನಾಯಕರು ಇವರ ಪ್ಲಾನ್ ಗೆ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತಾರೆ ? ಎಂಬುದನ್ನು ಕಾದುನೋಡಬೇಕಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here