



ಬಂಟ್ವಾಳ: ಪಿ.ಎಫ್.ಐ. ತಲಪಾಡಿ, ಬಿ.ಸಿರೋಡ್ ಘಟಕದ ವತಿಯಿಂದ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ‘ಆಯುಷ್ಮಾನ್ ಭಾರತ್’ ಕಾರ್ಡ್ ಯೋಜನೆಯ ಅಭಿಯಾನ ತಲಪಾಡಿ ಮಸೀದಿ ವಠಾರದಲ್ಲಿ ರವಿವಾರ ನಡೆಯಿತು.
ಸುಮಾರು 250 ಕ್ಕಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ನೋಂದಾಣಿ ಮಾಡಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್ ಐ ತಲಪಾಡಿ ಅಧ್ಯಕ್ಷ ಅಶ್ರಫ್ ಬಿ.ಎಮ್.ಟಿ ವಹಿಸಿದ್ದರು.
ಅತಿಥಿಗಳಾಗಿ ಆಗಮಿಸಿದ ಪಿಎಫ್ ಐ ಬಂಟ್ವಾಳ ತಾಲೂಕು ಸಮಿತಿ ಸದಸ್ಯ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿ, ಪಿ.ಎಫ್.ಐ. ಸಂಘಟನೆಯು ದೇಶವ್ಯಾಪಿ ಸಾಮಾಜಿಕವಾಗಿ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸೇವೆ ಮಾಡುತ್ತಿದ್ದು, ಸರಕಾರದ ಎಲ್ಲಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮತ್ತು ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಸಂಘಟನೆಯ ಮೇಲಿನ ಜನರ ನಿರೀಕ್ಷೆಗಳು ಮತ್ತಷ್ಟು ಬಲಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬದ್ರಿಯಾ ಜಮಾ ಮಸೀದಿಯ ಉಸ್ತಾದ್ ಅಬ್ದುಲ್ ರಝಾಕ್ ದಾರಿಮಿ, ಕಮಿಟಿ ಕಾರ್ಯದರ್ಶಿ ಲತೀಫ್ ಬಿ.ಎಮ್.ಟಿ, ಫಹದ್ ಅನ್ವರ್, ಅಫ್ತಾಬ್ ತಲಪಾಡಿ, ಶಾಹುಲ್ ತಲಪಾಡಿ ಉಪಸ್ಥಿತರಿದ್ದರು. ಹಫೀಝ್ ಸ್ವಾಗತಿಸಿ, ಸಾಧಿಕ್ ತಲಪಾಡಿ ನಿರೂಪಿಸಿ ವಂದಿಸಿದರು.






