ಬಂಟ್ವಾಳ: ಮುಲಾರಪಟ್ನ ಜಿ.ಎಚ್.ಎಮ್. ಫೌಂಡೇಶನ್ (ರಿ.) ವತಿಯಿಂದ ನೂತನ ಮನೆಯ “ಬೈದುಲ್ ಹುದಾ 2 ” ಹಸ್ತಾಂತರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮುಲಾರಪಟ್ನದಲ್ಲಿ ಇಂದು ನಡೆಯಿತು.

ಸುಮಾರು 6 ಲಕ್ಷ ವೆಚ್ಚದಲ್ಲಿ 600 ಚದರ ಅಡಿಯ
ನೂತನ ಮನೆಯನ್ನು ರಿಬನ್ ತುಂಡರಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿ, ಬಳಿಕ ಮನೆಯ ಕೀ ಯನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ಮುಲಾರಪಟ್ನದ ಜಿ.ಎಚ್.ಎಮ್. ಫೌಂಡೇಶನ್ ನ ಸದಸ್ಯರು ನಿಜಕ್ಕೂ ಪುಣ್ಯದ ಕಾರ್ಯ ಮಾಡಿದ್ದಾರೆ. ಮನೆಯಿಲ್ಲದೆ ನಿರ್ಗತಿಕ, ಬಡತನದಲ್ಲಿದ್ದ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿರುವುದು ಸಮಾಜಕ್ಕೆ ಮಾದರಿ ಕೆಲಸವಾಗಿದೆ. ದೇವರ ಆಶೀರ್ವಾದದಿಂದ ಉತ್ತಮ ಕೆಲಸ ಆಗಿದೆ.
ದೇಶವನ್ನು ಪ್ರೀತಿ ಮಾಡಬೇಕು, ದೇಶದ ವಿಚಾರದಲ್ಲಿ ರಾಜಿ ಮಾಡಬಾರದು, ಭಾರತ ದೇಶ ವಸುದೈವ ಕುಟುಂಬದ ಆಧಾರ ಮೇಲೆ ನಡೆಯುತ್ತಿದೆ. ಜಗತ್ತು ಒಂದು ಕುಟುಂಬ ಎಂಬ ದೃಷ್ಟಿಯಿಂದ ನಾವೆಲ್ಲರೂ ದೇಶದ ಪ್ರಗತಿಗೆ ಒಂದಾಗಿ ಕೆಲಸ ಮಾಡೋಣ ಎಂದು ಅವರು ಹೇಳಿದರು.
ಎಲ್ಲಿ ಶಾಂತಿ ಇದೆಯೋ ಅಲ್ಲಿ ಅಭಿವೃದ್ಧಿ ಖಂಡಿತ.
ಧನಾತ್ಮಕ ಆಲೋಚನೆಯನ್ನು ಮಾಡಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ.
ನಾನು ಶಾಸಕನಾದ ಆರಂಭದಲ್ಲಿ ರಾಜಧರ್ಮವನ್ನು ಪಾಲಿಸಿಕೊಂಡು ಆಡಳಿತ ನಡೆಸುವ ಭರವಸೆ ನೀಡಿದ್ದೇನೆ, ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ಕೊರೊನಾದ ಬಗ್ಗೆ ಜಾಗೃತಿಯಿರಲಿ, ಸಾಮಾಜಿಕ, ದೈಹಿಕ ಅಂತರವನ್ನು ಕಾಯ್ದುಕೊಂಡು ಆರೋಗ್ಯವಂತರಾಗಿ ಆದರೆ ಮಾನಸಿಕವಾಗಿ ಅಂತರ ಮಾಡುವುದು ಬೇಡ ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಅಬ್ದುಲ್ ಅಜೀಜ್ ಧಾರಿಮಿ ಮಾತನಾಡಿ, ಶಾಸಕರ ಹೃದಯದ ಮೂಲಕ ಬರುವ ಮಾತು ಸಮಾಜವನ್ನು ಒಟ್ಟುಗೂಡಿಸಿ ಅಭಿವೃದ್ದಿಗೆ ಹಗಲಿರುಳು ಶ್ರಮಿಸುವ ಸಂತ ಎಂಬುದಕ್ಕೆ ಅನೇಕ ನಿದರ್ಶನಗಳು ಇದೆ ಎಂದು ಅವರು ಹೇಳಿದರು.
ಜನರ ಭಾವನೆಗಳನ್ನು ಆರ್ಥ ಮಾಡಿಕೊಂಡು ಜನರ ಕಷ್ಟಗಳನ್ನು ನೀಗಿಸುವ ಕೆಲಸ ಮಾಡುವ ಈ ಸಂಘಟನೆ ಉದಾತ್ತವಾಗಿದೆ, ಜನರ ಮನಸ್ಸು ಗೆದ್ದು ಕೊರೊನಾ ಗೆಲ್ಲೋಣ ಎಂದರು.

ಕೇಂದ್ರ ಜುಮಾ ಮಸೀದಿ ಖತೀಬರಾದ ಅಬುಸಲಾಂ ಯಮಾನಿ
ದುವಾ ನೆರವೇರಿಸಿದರು. ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಫಾರೂಕ್, ಸ್ಥಳೀಯರಾದ ನಂದರಾಮ ರೈ, ಜಿ.ಎಚ್. ಎಮ್. ಫೌಂಡೇಶನ್ ನ ಅಧ್ಯಕ್ಷ ಜನಾಬ್ ಹಂಝ ಗುತ್ತು, ಉದ್ಯಮಿ ನಜೀರ್ ಆಹಮ್ಮದ್, ಸಮಾಜ ಸೇವಕ ಹಾಜಿ ರಫೀಕ್ ಮಾಸ್ಟರ್, ಗೌರವ ಸಲಹೆಗಾರ ಎಂ.ಬಿ.ಆಶ್ರಫ್, ನಂಡೆ ಪೆಂಗಲ್ ಅಧ್ಯಕ್ಷ ನೌಶಾದ್ ಹಾಜಿ, ಮುತ್ತೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸ ಕರಾದ ನಿರಂಜನ, ಮೌಲನ ಆಜಾದ್ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಹನೀಫ್, ಉದ್ಯಮಿ ಯೂಸುಫ್ ಹಾಜಿ, ಟ್ರಸ್ಟ್ ಗಳಾದ ಎಂ.ಎಸ್.ಶಾಲಿ, ಎಂ.ಬಿ.ಶಾಫಿ, ಅಬ್ದುಲ್ ರಹಮಾನ್ ಮತ್ತಿರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಾಕೃತಿಕ ವಿಕೋಪ ನಿಧಿಗೆ ಪರಿಹಾರದ ಧನ 20 ಸಾವಿರ ರೂ. ಚೆಕ್ ನ್ನು ಶಾಸಕರ ಮೂಲಕ ಸರಕಾರಕ್ಕೆ ನೀಡಲಾಯಿತು. ರಾಜ ಧರ್ಮ ಎಂಬ ಪರಿಕಲ್ಪನೆಯೊಂದಿಗೆ ಆಡಳಿತ ನಡೆಸುವ ಬಂಟ್ವಾಳ ಶಾಸಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಜೀವತ ಮತ್ತು ಭವಿಷ್ ಕುಮಾರ್ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ರಫೀಕ್ ಮಾಸ್ಟರ್, ರಕ್ತದಾನ ಶಿಬಿರ, ಪಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವು, ನಿರ್ಗತಿಕರಿಗೆ ನಿವೇಶನ, ಬಡವರಿಗೆ ಮನೆ ನಿರ್ಮಾಣ , ಶಿಕ್ಷಣ ಹೀಗೆ ಸರ್ವಧರ್ಮದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಅನೇಕ ಜನಪರ ಕಾರ್ಯಕ್ರಮ ಗಳು ಮಾಡಿರುವುದು ಶ್ಲಾಘನೀಯ ಎಂದರು.
ಈ ಸಂಘಟನೆ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಸರ್ವ ಧರ್ಮದ ಹತ್ತು ಕುಟುಂಬಕ್ಕೆ ಉಚಿತ ಪ್ರತಿ ತಿಂಗಳ ರೇಶನ್ ಅವರಿಗೆ ಬೇಕಾದಷ್ಟು ಅಂಗಡಿಯವರಿಂದ ಪಡೆದುಕೊಂಡು ಹೋಗಲು ಅವಕಾಶ ನೀಡಿದ ಈ ಭಾಗದ, ಸಂಘಟನೆ.

ಸಂಘಟನೆ ಸದಸ್ಯ ಸಜೀವುದ್ದೀನ್ ಸ್ವಾಗತಿಸಿ, ಸಂಘಟನೆಯ ಸದಸ್ಯ ವಕೀಲ ಅನ್ಸಾರ್ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here